‘ಕೆಜಿಎಫ್ 2′ ನಟಿ ರವೀನಾ ಟಂಡನ್‌ಗೆ (Raveena Tandon) ಸೌತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಮತ್ತೊಂದು ದಕ್ಷಿಣದ ಸಿನಿಮಾವನ್ನು ನಟಿ ಒಪ್ಪಿಕೊಂಡಿದ್ದಾರೆ. ನಟ ಸುಧೀರ್ ಬಾಬು (Sudheer Babu) ನಟನೆಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತೆಲುಗು ನಟ ಸುಧೀರ್ ಬಾಬು ನಟನೆಯ ‘ಜಟಾಧರ’ (Jatadhara) ಸಿನಿಮಾದಲ್ಲಿ ರವೀನಾ ಟಂಡನ್ ವಿಲನ್ ಆಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಈ ಚಿತ್ರದಲ್ಲಿ ನಟಿಗೆ ಉತ್ತಮ ಪಾತ್ರವಿದೆಯಂತೆ. ಸುಧೀರ್‌ಗೆ ಠಕ್ಕರ್ ಕೊಡುವ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಸಮಂತಾ ಮನೆಯಲ್ಲಿ ಮದುವೆ ಸಡಗರ- ಹೂಗುಚ್ಛ ಹಿಡಿದು ನಿಂತ ನಟಿ
View this post on Instagram
ಇತ್ತೀಚೆಗೆ ‘ಜಟಾಧರ’ ಸಿನಿಮಾ ಪೋಸ್ಟರ್ ಲುಕ್ ಮೂಲಕ ಗಮನ ಸೆಳೆದಿದ್ದ ಸುಧೀರ್ ಬಾಬು ಈ ಸಿನಿಮಾ ಹಾರರ್ ಚಿತ್ರವಾಗಿದೆ. ಶಿವಿನ್ ನಾರಂಗ್ ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ರವೀನಾ ನಟಿಸಲಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದ್ದು, ನಟಿಯ ಎಂಟ್ರಿಯ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸಬೇಕಿದೆ.
ಸದ್ಯ ನಟಿ ‘ವೆಲ್ ಕಂ ಟು ದ ಜಂಗಲ್’ ಎಂಬ ಸಿನಿಮಾದಲ್ಲಿ ರವೀನಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲೂ ಅವರಿಗೆ ನಟನೆಗೆ ಸ್ಕೋಪ್ ಇರುವ ಪಾತ್ರವೇ ಸಿಕ್ಕಿದೆ.