ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ (Sanjay Dutt) ಇದೀಗ ‘ಪುಷ್ಪ 2’ (Pushpa 2) ಅಡ್ಡಾಗೆ ಎಂಟ್ರಿ ಕೊಡ್ತಿದ್ದಾರೆ. ಅಲ್ಲು ಅರ್ಜುನ್ (Allu Arjun) ಮುಂದೆ ತೊಡೆ ತಟ್ಟೋಕೆ ಅಧೀರ ರೆಡಿಯಾಗುತ್ತಿದ್ದಾರೆ. ಹಾಗಾದ್ರೆ ಅದ್ಯಾವ ಪಾತ್ರದಲ್ಲಿ ‘ಕೆಜಿಎಫ್ 2’ (KGF 2) ನಟ ಆಕ್ಟ್ ಮಾಡ್ತಿದ್ದಾರೆ. ಇಲ್ಲಿದೆ ಮಾಹಿತಿ.
ಚಿತ್ರರಂಗದಲ್ಲಿ ಸದ್ಯ ಕಮಾಲ್ ಮಾಡ್ತಿರುವ ಸಿನಿಮಾ ಅಂದರೆ ಅದು ದಕ್ಷಿಣ ಭಾರತದ ಚಿತ್ರಗಳು. ಬಾಲಿವುಡ್ ಚಿತ್ರಗಳಿಗೆ ಕಿಮ್ಮತ್ತು ಕೊಡುವ ಕಾಲ ಕಮ್ಮಿಯಾಗಿದೆ. ಪ್ರೇಕ್ಷಕರು ಕೂಡ ಹಿಂದಿ ಚಿತ್ರ ಬಿಟ್ಟು ಕನ್ನಡ, ತೆಲುಗು, ತಮಿಳು, ಮಲಯಾಳಂ ಕಂಟೆಂಟ್‌ಗಳತ್ತ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಸಂಜಯ್ ದತ್, ರವೀನಾ, ಅನುಪಮ್ ಖೇರ್ ಇದೀಗ ದಕ್ಷಿಣದ ಚಿತ್ರಗಳ ಕಡೆ ಒಲವು ತೋರಿಸುತ್ತಿದ್ದಾರೆ.
‘ಕೆಜಿಎಫ್ 2’ ಹಿಟ್ ಆದ್ಮೇಲಂತೂ ಕನ್ನಡ ಮತ್ತು ಸೌತ್ ಸಿನಿಮಾಗಳಿಗೆ ಸಂಜಯ್ ದತ್ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದಾರೆ. ಸದ್ಯ ‘ಪುಷ್ಪ 2’ (Pushpa 2) ಚಿತ್ರಕ್ಕೆ ಸಂಜಯ್ ದತ್ (Sanjay Dutt) ಎಂಟ್ರಿ ಕೊಡಲಿದ್ದಾರೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೆಸ್ಟ್ ರೋಲ್ ಆಗಿದ್ರು, ಕೂಡ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಒಟ್ನಲ್ಲಿ ಸಂಜಯ್ ದತ್ ಪವರ್‌ಫುಲ್ ಪಾತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ‘ಪುಷ್ಪ 2’ ಸಿನಿಮಾ ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.



