ನವದೆಹಲಿ: 2014ರ ನಂತರ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಆರ್ಥಿಕತೆ ಸುಧಾರಿಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬಜೆಟ್ ಹೈಲೈಟ್ಸ್
– ವಿಶ್ವಸಂಸ್ಥೆ ಯ ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಜಿಗಿದು ಭಾರತ 100ನೇ ಸ್ಥಾನವನ್ನು ಪಡೆದಿದೆ.
– 2018-19 ರ ಎರಡನೇ ತ್ರೈಮಾಸಿಕದಲ್ಲಿ ಭಾರತ 7.2 -7.5% ಜಿಡಿಪಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ.
– ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನ ನೀಡುತ್ತೇವೆ.
– ನೋಟು ನಿಷೇಧ, ಜಿಎಸ್‍ಟಿ, ಎಫ್‍ಡಿಐ ಇತ್ಯಾದಿಗಳಿಂದ ದೇಶದ ಆರ್ಥಿಕತೆ ಅಭಿವೃದ್ಧಿಯಾಗುತ್ತಿದೆ.
– ಕೃಷಿ ಉತ್ಪನ್ನಗಳ ಮೇಲೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವುದು ಮಾತ್ರ ಸಾಕಾಗುವುದಿಲ್ಲ. ರೈತರಿಗೆ ಹೆಚ್ಚಿನ ಲಾಭ ಹಾಗೂ ಉತ್ಪಾದಕ ಉದ್ಯೋಗ ದೊರಕಿಸುವುದು ನಮ್ಮ ಉದ್ದೇಶ.
– ಈ ವರ್ಷದ ಬಜೆಟ್ ಮುಖ್ಯವಾಗಿ ಕೃಷಿ ಮೇಲೆ ಕೇಂದ್ರೀಕೃತವಾಗಿರಲಿದೆ.
– ಜಗತ್ತಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಭಾರತವೂ ಒಂದಾಗಿದೆ