ಪ್ರೀತಿಯ ಮಹತ್ವ ಅದನ್ನು ನಡೆಸುವವರಿಂದ ತಿಳಿಯುತ್ತದೆ. ಪರಸ್ಪರರು ತಮ್ಮ ಸಂಬಂಧದ ಅವಧಿಯಲ್ಲಿ ಪರಸ್ಪರ ಬಹಳಷ್ಟು ಕಲಿಯುತ್ತಾರೆ. ಆದರೆ ಇಬ್ಬರು ಅಪ್ರಬುದ್ಧ ವ್ಯಕ್ತಿಗಳು ಸಂಬಂಧಕ್ಕೆ ಬಂದಾಗ ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಕಾರ್ಯಗಳಿಗೆ ಜವಾಬ್ದಾರರಾಗಿರುವುದೂ ಇಲ್ಲ. ಆದರೆ ಪ್ರಬುದ್ಧ ಜನರು ಪ್ರೀತಿಯಲ್ಲಿದ್ದರೆ ಯಶಸ್ವಿ ಮತ್ತು ಸುಂದರ ಬಾಂಧವ್ಯ ಸಾಧ್ಯವಾಗುತ್ತದೆ. ಪ್ರಬುದ್ಧ ಮತ್ತು ಅಪ್ರಬುದ್ಧ ಪ್ರೀತಿಗೆ ಇರುವ ವ್ಯತ್ಯಾಸ ನಿಮಗೆ ತಿಳಿದಿದೆಯೇ?
1)ಪ್ರಶ್ನೆಗಳನ್ನು ಕೇಳುವುದು ಮತ್ತು ಸಮಸ್ಯೆ ಬಗೆಹರಿಸಿಕೊಳ್ಳುವುದು
ಅಪ್ರಬುದ್ಧ ಪ್ರೀತಿ: ಇವರು ತಮ್ಮ ಪ್ರೀತಿಯ ಬಗ್ಗೆ ಅನುಮಾನಗಳನ್ನು ಹೊಂದಿರುತ್ತಾರೆ. ತಮ್ಮ ಸಂಬಂಧದ ಬಗ್ಗೆ ಖಚಿತವಾಗಿರುವುದಿಲ್ಲ. ಯಾವಾಗಲೂ ಪರಸ್ಪರರು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
Advertisement
ಪ್ರಬುದ್ಧ ಪ್ರೀತಿ: ಇವರು ತಮ್ಮ ಸಂಬಂಧ ವಿಚಾರವಾಗಿ ತೃಪ್ತರಾಗಿರುತ್ತಾರೆ. ಪರಸ್ಪರರು ಅವಾಸ್ತವಿಕವಾಗಿ ನಡೆದುಕೊಳ್ಳದೇ ವಸ್ತುಸ್ಥಿತಿಯನ್ನು ಅರಿತು ಜೀವನ ನಡೆಸುತ್ತಾರೆ. ಇದನ್ನೂ ಓದಿ: ಬಾಳಿ ಬದುಕಿದ್ದ ಮನೆಯನ್ನೇ ಖಾಲಿ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್
Advertisement
Advertisement
2) ಸಂಬಂಧದಲ್ಲಿ ಹೆಚ್ಚಿನದನ್ನು ಬಯಸುವುದು
ಅಪ್ರಬುದ್ಧ ಪ್ರೀತಿ: ಇವರು ಯಾವಾಗಲೂ ತಮ್ಮ ಸಂಗಾತಿಯಿಂದ ಹೆಚ್ಚಿನದನ್ನು ಬಯಸುತ್ತಾರೆ. ತಮ್ಮ ಸಂಗಾತಿಯ ವಿಚಾರವಾಗಿ ಅವರು ಎಂದಿಗೂ ತೃಪ್ತರಾಗಿರುವುದಿಲ್ಲ. ಅತೃಪ್ತ ಭಾವವನ್ನು ಹೊಂದಿರುತ್ತಾರೆ.
Advertisement
ಪ್ರಬುದ್ಧ ಪ್ರೀತಿ: ಇವರು ತಮ್ಮ ಸಂಗಾತಿ ವಿಷಯದಲ್ಲಿ ತೃಪ್ತ ಮನೋಭಾವ ಹೊಂದಿರುತ್ತಾರೆ. ಸಂಗಾತಿಯನ್ನು ಇದ್ದಂತೆಯೇ ಸ್ವೀಕರಿಸುತ್ತಾರೆ. ಅವರಿಂದ ಹೆಚ್ಚಿನದನ್ನು ನಿರೀಕ್ಷಿಸದೇ ಪರಸ್ಪರ ಸ್ವತಂತ್ರ ಭಾವದಲ್ಲಿ ಸಾಗುತ್ತಾರೆ.
3) ಸಂಬಂಧದಲ್ಲಿ ಸ್ವಂತಿಕೆ
ಅಪ್ರಬುದ್ಧ ಪ್ರೀತಿ: ಸಂಗಾತಿ ತನ್ನಂತೆಯೇ ಇರಬೇಕು ಎಂಬ ಹಪಾಹಪಿ ಹೆಚ್ಚಿರುತ್ತದೆ. ಕೆಲವು ವಿಷಯಗಳಲ್ಲಿ ಸ್ವಂತಿಕೆ ಇರಬೇಕು ಎಂಬ ಮನೋಭಾವವನ್ನು ಒಪ್ಪುವುದಿಲ್ಲ.
ಪ್ರಬುದ್ಧ ಪ್ರೀತಿ: ಪ್ರಬುದ್ಧರು ತಮ್ಮ ಸಂಬಂಧದಲ್ಲಿ ಎಂದಿಗೂ ಸ್ವಂತಿಕೆಯನ್ನು ಕಾಪಾಡಿಕೊಂಡಿರುತ್ತಾರೆ. ಪ್ರೀತಿಯಲ್ಲಿ ಒಗ್ಗಟ್ಟಾಗಿದ್ದರೂ, ತಮ್ಮದೇ ಅಭಿಪ್ರಾಯ, ದೃಷ್ಟಿಕೋನ ಮತ್ತು ಆಲೋಚನೆಗಳಿಗೆ ಬದ್ಧರಾಗಿರುತ್ತಾರೆ. ಅವರು ತಮ್ಮ ಅಭಿಪ್ರಾಯಗಳನ್ನು ಪರಸ್ಪರರ ಮೇಲೆ ಹೇರಲು ಪ್ರಯತ್ನಿಸುವುದಿಲ್ಲ. ಪರಸ್ಪರರನ್ನು ಗೌರವಿಸುತ್ತಾರೆ. ಇದನ್ನೂ ಓದಿ: MeeToo : ಆ ಅಸಹ್ಯ ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ರತನ್ ರಾಜಪೂತ್
4) ಪ್ರೇರಣೆ
ಅಪ್ರಬುದ್ಧ ಪ್ರೀತಿ: ಸಂಗಾತಿಗಳ ಪ್ರೀತಿಯ ಭಾವ ಅಪರಿಪೂರ್ಣವಾಗಿರುತ್ತದೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ ಪರಸ್ಪರರಿಗೆ ಪ್ರೇರಕ ಶಕ್ತಿಯಾಗಿರಲು ಸಾಧ್ಯವಿಲ್ಲ.
ಪ್ರಬುದ್ಧ ಪ್ರೀತಿ: ಸಂಗಾತಿಗಳು ಪರಸ್ಪರರಿಗೆ ಪ್ರೇರಕ ಶಕ್ತಿಯಾಗಿರುತ್ತಾರೆ. ಎಂದಿಗೂ ತಮ್ಮ ಸಂಗಾತಿಯ ಆಸೆ, ಆಕಾಂಕ್ಷೆಗಳಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಾರೆ.
5) ಅವಲಂಬನೆ
ಅಪ್ರಬುದ್ಧ ಪ್ರೀತಿ: ಸಂಗಾತಿಗಳು ಪರಸ್ಪರರ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಬದುಕಿನ ವಿಚಾರದಲ್ಲೂ ಅವಲಂಬನೆ ಹೆಚ್ಚಿರುತ್ತದೆ. ಜೀವನದ ಪ್ರತಿಯೊಂದು ಸನ್ನಿವೇಶ ಎದುರಿಸಲು ಅವರಿಗೆ ಪರಸ್ಪರರ ಸಹಾಯ ಬೇಕಾಗುತ್ತದೆ.
ಪ್ರಬುದ್ಧ ಪ್ರೀತಿ: ಸಂಗಾತಿಗಳು ಪರಸ್ಪರರನ್ನು ಎಂದಿಗೂ ಅವಲಂಬಿಸುವುದಿಲ್ಲ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಜೊತೆ ಇರುವಂತೆ ಅಪೇಕ್ಷೆಯನ್ನು ವ್ಯಕ್ತಪಡಿಸಬಹುದು. ಆದರೆ ಸಂಪೂರ್ಣ ಅವಲಂಬಿತರಾಗಿರುವುದಿಲ್ಲ. ಇದನ್ನೂ ಓದಿ: ಖ್ಯಾತ ನಟಿ ಆಶಾ ಪರೇಖ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ