ಚೆನ್ನೈ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಶುಕ್ರವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ತಂಡ ವಿರೋಚಿತ ಸೋಲನುಭವಿಸಿತು. ಆದ್ರೆ ಕೊನೆ ಕ್ಷಣದಲ್ಲಿ ಸಮಯೋಚಿತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್ ಮಹಾರಾಜ್ (Keshav Maharaj) ಈ ಪಂದ್ಯವನ್ನು ಹನುಮಾನ್‌ಗೆ ಅರ್ಪಿಸಿದ್ದಾರೆ.
View this post on Instagram
Advertisement
ಏಡನ್ ಮಾರ್ಕ್ರಮ್ (Aiden Markram) ವಿಕೆಟ್ ಬೀಳುತ್ತಿದ್ದಂತೆ ದಕ್ಷಿಣ ಆಫ್ರಿಕಾ ತಂಡದ ಒಂದೊಂದೇ ವಿಕೆಟ್ ಪತನಗೊಳ್ಳುತ್ತಿತ್ತು. ಇನ್ನೂ 46 ಓವರ್‌ಗಳಲ್ಲಿ 263 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಕೊನೇ ಕ್ಷಣದವರೆಗೂ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದ್ದ ಪಾಕ್ ತಂಡದ ಗೆಲುವಿಗೆ ಒಂದು ವಿಕೆಟ್ ಬೇಕಿತ್ತು. ಆದ್ರೆ ಕೊನೆಯಲ್ಲಿ ಕೇಶವ್ ಮಹರಾಜ್ ಸಮಯೋಚಿತ ಬ್ಯಾಟಿಂಗ್‌ನಿಂದ ಆಫ್ರಿಕಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: 20 ವರ್ಷಗಳಿಂದ ಆಂಗ್ಲರ ವಿರುದ್ಧ ಗೆದ್ದೇ ಇಲ್ಲ ಭಾರತ – ಸೇಡು ತೀರಿಸಿಕೊಳ್ಳಲು ಸಮರಾಭ್ಯಾಸ?
Advertisement
Advertisement
ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಕೇಶವ್ ಮಹರಾಜ್, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತೋರಿದ ಪ್ರದರ್ಶನದಿಂದ ಹೀರೋ ಆಗಿ ಮಿಂಚುತ್ತಿದ್ದಾರೆ. ಸ್ಪಿನ್ ಆಲ್ ರೌಂಡರ್ ಆಗಿದ್ದರೂ ಮಹರಾಜ್ ಬೌಲಿಂಗ್ ನಲ್ಲಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಬ್ಯಾಟಿಂಗ್ ನಲ್ಲೂ 21 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದರು. ಆದ್ರೆ 9 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿದ್ದ ತಮ್ಮ ತಂಡಕ್ಕೆ ಮಹರಾಜ್ ರೋಚಕ ಜಯ ತಂದುಕೊಟ್ಟರು. ಪಾಕಿಸ್ತಾನದ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿ ಸಮಯೋಚಿತ ಆಟವಾಡಿದ ಕೇಶವ್ ತಂಡದ ಹೀರೋ ಎನಿಸಿಕೊಂಡರೆ ಪಾಕಿಸ್ತಾನ ಆಟಗಾರರ ಪಾಲಿಗೆ ವಿಲನ್ ಆಗಿದ್ದಾರೆ. ಇದನ್ನೂ ಓದಿ: 23 ವರ್ಷಗಳ ಬಳಿಕ ಗೆದ್ದು ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಆಫ್ರಿಕಾ – ಸೆಮಿಫೈನಲ್ ರೇಸ್‌ನಿಂದ ಪಾಕ್ ಔಟ್
Advertisement
ಪಾಕಿಸ್ತಾನದ ವಿರುದ್ಧ ಗೆಲುವಿನ ಬಳಿಕ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನುಹಂಚಿಕೊಂಡಿರುವ ಕೇಶವ್, ʻಜೈ ಶ್ರೀ ಹನುಮಾನ್ʼ (Jai Shree Hanuman) ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ನಾನು ದೇವರನ್ನು ನಂಬುತ್ತೇನೆ. ಈ ಪಂದ್ಯದಲ್ಲಿ ನಮ್ಮ ತಂಡದ ಹುಡುಗರಿಂದ ಅದ್ಭುತ ಪ್ರದರ್ಶನ ಕಂಡುಬಂದಿದೆ. ಏಡನ್ ಮಾರ್ಕ್ರಮ್ ಅವರ ಬ್ಯಾಟಿಂಗ್, ಶಂಸಿ ಅವರ ಬೌಲಿಂಗ್ ಪ್ರದರ್ಶನ ಉತ್ತಮವಾಗಿ ತೋರಿದ್ದಾರೆ ಅಂತಲೂ ಬರೆದುಕೊಂಡಿದ್ದಾರೆ. ಅದು ಕೇಶವ್ ಮಹರಾಜ್ ಬರೆದುಕೊಂಡಿರುವ ʻಜೈ ಶ್ರೀ ಹನುಮಾನ್ʼ ಸಾಲುಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ: World Cup 2023: ಅಂದು ರೋಹಿತ್ ಶರ್ಮಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದು ಇದೇ ಕಾರಣಕ್ಕೆ
ಭಾರತೀಯ ಮೂಲದ ಕೇಶವ ಮಹರಾಜ್ ಫೆಬ್ರವರಿ 7, 1990 ರಂದು ಡರ್ಬನ್‌ನಲ್ಲಿ ಜನಿಸಿದರು. ಆಂಜನೇಯ ಸ್ವಾಮಿ ಹೆಚ್ಚು ಪೂಜಿಸುವ ಮಹಾರಾಜ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲೂ ಜೈ ಶ್ರೀ ಹನುಮಾನ್ ಎಂದು ಬರೆದಿದ್ದಾರೆ. ಅಲ್ಲದೇ, ಅವರ ಬ್ಯಾಟ್ ಮೇಲೆಯೂ ಓಂ ಎಂದು ಬರೆಯಲಾಗಿದೆ ಎಂಬುದು ವಿಶೇಷ.
Web Stories