ತಿರುವನಂತಪುರಂ: ಕೇರಳದ ಹೆಸರಾಂತ ಉರಗ ತಜ್ಞ ವಾವಾ ಸುರೇಶ್ ಅವರಿಗೆ ಕೊಟ್ಟಾಯಂನಲ್ಲಿ ನಾಗರ ಹಾವು ಕಚ್ಚಿದ್ದು, ಇದೀಗ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲಿಗೆ ಸುರೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಿ, ಆಂಟಿ ವೆನಮ್ ನೀಡಲಾಯಿತು. ಬಳಿಕ ವಿಶೇಷ ಚಿಕಿತ್ಸೆಗಾಗಿ ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
Advertisement
Advertisement
ಕೊಟ್ಟಾಯಂ ಬಳಿಯ ಕುರಿಚಿ ಗ್ರಾಮ ಪಂಚಾಯತ್‍ನ ನಿವಾಸಿಗಳು ದನದ ಕೊಟ್ಟಿಗೆಯ ಬಳಿ ಹಾಕಿದ್ದ ಕಲ್ಲಿನ ರಾಶಿಗಳ ನಡುವೆ ನಾಗರಹಾವನ್ನು ಕಂಡು ನಂತರ ಹಾವು ಹಿಡಿಯಲು ಸುರೇಶ್ ಅವರನ್ನು ಮನೆಗೆ ಕರೆದಿದ್ದಾರೆ. ಈ ವೇಳೆ ಸುರೇಶ್ ಹಾವು ಹಿಡಿಯಲು ನೋಡುವುದಕ್ಕೆ ಹಲವಾರು ಮಂದಿ ಸ್ಥಳಕ್ಕೆ ಆಗಮಿಸಿದ್ದರು. ಆದರೆ ವಿಷಕಾರಿ ಸರೀಸೃಪ ಒಂದು ಕೈಯಲ್ಲಿ ಬಾಲ ಹಿಡಿದುಕೊಂಡು ಗೋಣಿ ಚೀಲಕ್ಕೆ ಹಾಕಲು ಪ್ರಯತ್ನಿಸುತ್ತಿದ್ದ ವೇಳೆ ಸುರೇಶ್ ಅವರ ಬಲ ತೊಡೆಯ ಮೇಲೆ ಕಚ್ಚಿದೆ. ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್ ಸೇವೆ
Advertisement
Praing for you #VavaSuresh. Appreciate your sincerity and brilliance. Requesting you to plz use snake catching tools. Wish you a speedy recovery.
— PrabhathT Thankachen (@Prabhath_Mvlk) February 1, 2022
Advertisement
ತನಗೆ ಹಾವು ಕಚ್ಚಿ ತಪ್ಪಿಸಿಕೊಳ್ಳುತ್ತಿದ್ದರೂ, ನಾಗರ ಹಾವನ್ನು ಹಿಡಿದು ಸುರೇಶ್ ಅವರು ಪ್ಯಾಕ್ ಮಾಡಿದ್ದಾರೆ. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ಸುರೇಶ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲೆಡೆ ಪ್ರಾರ್ಥಿಸಲಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ಶೀಘ್ರ ಗುಣಮುಖರಾಗಲಿ ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ.
Read about Vava Suresh this morning and the snake bite. Hope he gets better.
You think as you get older it is better to quit snake catching? Your reflexes get slower and it is a dangerous profession to be in. @PrakruthiKS @vinaynx
— Poraloid (@rahulporal) February 1, 2022
ಸುರೇಶ್ ಅವರು ಎರಡು ದಶಕಗಳ ಕಾಲದ ವೃತ್ತಿಜೀವನದಲ್ಲಿ 50,000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ. ಇದರಲ್ಲಿ 200ಕ್ಕೂ ಹೆಚ್ಚು ಕಿಂಗ್ ಕೋಬ್ರಾಗಳನ್ನು ಹಿಡಿದಿದ್ದಾರೆ. ಅವರು ಸುಮಾರು 300 ಹಾವುಗಳ ಕಡಿತಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: Union Budget: ದುಡಿಯುವ ವರ್ಗದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ: ರಣದೀಪ್ ಸುರ್ಜೇವಾಲಾ ವ್ಯಂಗ್ಯ