ಅಬುಧಾಬಿ: ಭಾರತ ಮೂಲದ ಮಹಿಳೆಯೊಬ್ಬರು ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿಯನ್ನು ಗೆದ್ದಿದ್ದಾರೆ.
ವರದಿಗಳ ಪ್ರಕಾರ ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ವಲಸಿಗ ಮಹಿಳೆಯೊಬ್ಬರು ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ 44.75 ಕೋಟಿ ರೂ. ಗೆದ್ದಿದ್ದಾರೆ. ಈ ಮಹಿಳೆ ಕೇರಳ ಮೂಲದ ಲೀನಾ ಜಲಾಲ್. ಇವರು ಬಿಗ್ ಟಿಕೆಟ್ ಅಬುಧಾಬಿ ವೀಕ್ಲಿ ಡ್ರಾದಲ್ಲಿ 22 ಮಿಲಿಯನ್ ದಿರ್ಹಂ(44.75 ಕೋಟಿ ರೂ) ಗೆದ್ದಿದ್ದಾರೆ.
Advertisement
Advertisement
ಫೆಬ್ರವರಿ 3 ರಂದು ನಡೆದ ಲಕ್ಕಿ ಡ್ರಾದಲ್ಲಿ, ಜಲಾಲ್ ಅವರ ಟಿಕೆಟ್ ಸಂಖ್ಯೆ 144387 ಹೊಂದಿದ್ದು, ಈ ಸಂಖ್ಯೆಯನ್ನು ಟೆರಿಫಿಕ್ 22 ಮಿಲಿಯನ್ ಸರಣಿ 236ನಲ್ಲಿ ಆಯ್ಕೆ ಮಾಡಲಾಗಿದೆ. ವರದಿಯ ಪ್ರಕಾರ, ಜಲಾಲ್ ಅಬುಧಾಬಿಯಲ್ಲಿ ಹ್ಯೂಮನ್ ರಿಸೋರ್ಸಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ‘ಬ್ಲಾಕ್‍ಚೈನ್’ ಮೂಲಕ ಮದುವೆಯಾದ ಭಾರತದ ಮೊದಲ ದಂಪತಿ!
Advertisement
ತಮಗೆ ಬಂದ ಅದೃಷ್ಟದ ಬಗ್ಗೆ ಮಾತನಾಡಿದ ಅವರು, ಈ ಲಕ್ಕಿ ಡ್ರಾದಲ್ಲಿ ಬಂದ ಹಣವನ್ನು 10 ಜನರಿಗಾದರೂ ಸಹಾಯ ಮಾಡುತ್ತೇನೆ. ಸಮಾಜದ ಒಳ್ಳೆಯದಕ್ಕೆ ಬಳಸುತ್ತೇನೆ ಎಂದು ತಿಳಿಸಿದ್ದಾರೆ. ಲಕ್ಕಿ ಡ್ರಾ ಮೂಲಕ ಅದೃಷ್ಟವನ್ನು ಪಡೆದ ಏಕೈಕ ಭಾರತೀಯ ಇವರೊಬ್ಬರೆ ಅಲ್ಲ. ಕೇರಳದ ಮತ್ತೊಬ್ಬ ವಲಸಿಗರಾದ ಸುರೈಫ್ ಸುರು ಅವರು ಸಹ 1 ಮಿಲಿಯನ್ ದಿರ್ಹಂ(2,03,21,929) ಗೆದ್ದಿದ್ದಾರೆ.
Advertisement
ಕೇರಳದ ಮಲ್ಲಪುರಂ ಜಿಲ್ಲೆಗೆ ಸೇರಿದ ಸುರು ಅವರು ಮಾಧ್ಯಮಗಳೊಂದಿಗೆ ಮಾತನಾಡಿದು, ಬಹುಮಾನದ ಹಣವನ್ನು ಇತರ 29 ಜನರೊಂದಿಗೆ ಹಂಚಿಕೊಳ್ಳುತ್ತೇನೆ. ಲಾಟರಿಯಲ್ಲಿ ಬಂದ ಸ್ವಲ್ಪ ಹಣವನ್ನು ನನ್ನ ಸ್ನೇಹಿತರಿಗೆ ಸಹಾಯ ಮಾಡುತ್ತೇನೆ. ನನ್ನನ್ನು ಹೆತ್ತವರಿಗೆ ಸ್ವಲ್ಪ ಹಣವನ್ನು ನೀಡುತ್ತೇನೆ. ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನನ್ನ ಹೆಂಡತಿ ಮತ್ತು ಮಗಳಿಗೆ ಹಣವನ್ನು ಉಳಿಸಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ ಮಾಡಿದ ಸಿಎಂ