ತಿರುವನಂತಪುರಂ: ಬೀದಿ ನಾಯಿಗಳ(Stray Dog) ದಾಳಿಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕ್ರೋಧೋನ್ಮತ್ತ ಮತ್ತು ಹಿಂಸಾತ್ಮಕ ನಾಯಿಗಳನ್ನು ಕೊಲ್ಲಲು ಕೇರಳ(Kerala) ಸರ್ಕಾರ ಸುಪ್ರೀಂ ಕೋರ್ಟ್(Supreme Court)ನಿಂದ ಅನುಮತಿ ಪಡೆಯಲು ನಿರ್ಧರಿಸಿದೆ.
ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟಲು ಕೇರಳ ಸರ್ಕಾರ ದಾಳಿ ನಡೆಸುವಂತಹ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್‌ನ ಅನುಮತಿ ಕೇಳಲು ನಿರ್ಧರಿಸಿದೆ. ಮಾತ್ರವಲ್ಲದೇ ನಾಯಿಗಳ ಹಾವಳಿಯನ್ನು ತಡೆಯಲು ಸೆಪ್ಟೆಂಬರ್ 20 ರಿಂದ 1 ತಿಂಗಳ ಕಾಲ ಅಭಿಯಾನವನ್ನು ನಡೆಸಲು ಯೋಜಿಸಿದೆ.
Advertisement
ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗುತ್ತಿದೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ. ಹೆಚ್ಚುತ್ತಿರುವ ನಾಯಿ ಕಚ್ಚುವಿಕೆಯ ಪ್ರಕರಣಗಳನ್ನು ತಡೆಯಲು ಹಲವಾರು ಯೋಜನೆಗಳನ್ನು ರೂಪಿಸಲು ನಿರ್ಧರಿಸಿದ್ದೇವೆ ಎಂದು ಸಚಿವ ಎಂ.ಬಿ ರಾಜೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯಪಾನ ತಡೆ ನೀತಿ ಜಾರಿಗೆ ತರಲು ಮನವಿ – ಈ ವಿಷಯವನ್ನು ಮುಟ್ಟುವುದಿಲ್ಲ ಎಂದ ಸುಪ್ರೀಂಕೋರ್ಟ್
Advertisement
Advertisement
ಕೇರಳದಲ್ಲಿ ಹೆಚ್ಚುತ್ತಿರುವ ನಾಯಿ ಕಚ್ಚುವಿಕೆಯ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಇದರಿಂದ ಹಿಂಸಾತ್ಮಕ ದಾಳಿ ಮತ್ತು ರೇಬಿಸ್ ಸೋಂಕನ್ನು ತೊಡೆದುಹಾಕಲು ಅನುಮತಿಗಾಗಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದರು.
Advertisement
1 ತಿಂಗಳ ಅಭಿಯಾನದಲ್ಲಿ ನಾವು ಪ್ರಾಣಿಗಳ ಜನನ ನಿಯಂತ್ರಣ(ಎಬಿಸಿ) ಕ್ರಮಗಳನ್ನು ತೀವ್ರವಾಗಿ ಹೆಚ್ಚಿಸುತ್ತೇವೆ. ಬೀದಿ ನಾಯಿಗಳಿರುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಅವುಗಳಿಗೆ ಆಶ್ರಯಗಳನ್ನು ನಿರ್ಮಿಸುತ್ತೇವೆ. ರೋಗ ತಡೆಗಟ್ಟಲು ಸಾಕಷ್ಟು ಲಸಿಕೆಗಳನ್ನು ಸಂಗ್ರಹಿಸುತ್ತೇವೆ ಎಂದು ರಾಜೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಗಳು- ಬಾಲಕರು ಗ್ರೇಟ್ ಎಸ್ಕೇಪ್