ಪಾಠ ಮಾಡುವ ಗುರುಗಳಿಗೆ ಇನ್ಮುಂದೆ ಸರ್, ಮೇಡಂ ಎನ್ನುವಂತಿಲ್ಲ!

Public TV
1 Min Read
teacher

ತಿರುವನಂತಪುರಂ: ವಿದ್ಯಾರ್ಥಿಗಳು ಲಿಂಗಾನುಸಾರವಾಗಿ ಶಿಕ್ಷಕರನ್ನು ಸರ್, ಮೇಡಂ ಎಂದು ಕರೆಯುತ್ತಿದ್ದರು. ಆದರೆ ಇನ್ಮುಂದೆ ಕೇರಳದಲ್ಲಿ ಶಿಷ್ಯರು, ಗುರುಗಳನ್ನು ‘Teacher’ ಎಂದು ಸಂಬೋಧಿಸುದವುನ್ನು  ಕಡ್ಡಾಯಗೊಳಿಸಲಾಗಿದೆ.

ಇನ್ಮುಂದೆ ಲಿಂಗ ಬೇಧವಿಲ್ಲದೆ ವಿದ್ಯಾರ್ಥಿಗಳು Teacher ಎಂದು ಕರೆಯುತ್ತಾರೆ. ಈ ಧೋರಣೆಯನ್ನು ಜಾರಿಗೆ ತಂದಿರುವ ಕೇರಳದ ಮೊದಲ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾಲಕ್ಕಾಡ್ ಜಿಲ್ಲೆ ಒಲಶ್ಶೇರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ ಪಾತ್ರವಾಗಿದೆ. ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

Hassan Students 6

ಸರ್ಕಾರಿ ಕಚೇರಿಗಳಲ್ಲಿ ಸರ್ ಎಂದು ಸಂಬೋಧಿಸುವ ಅಭ್ಯಾಸವನ್ನು ತೊಡೆದು ಹಾಕಲು ಅಭಿಯಾನ ಪ್ರಾರಂಭಿಸಲಾಗಿದೆ. ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂದ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲನ್ ಎಚ್. ತಿಳಿಸಿದ್ದಾರೆ. ಇದನ್ನೂ ಓದಿ: ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

teacher

14 ಕಿ.ಮೀ. ದೂರದಲ್ಲಿರುವ ಮಾತೂರು ಪಂಚಾಯಿತಿಯಲ್ಲೂ ಕಳೆದ ವರ್ಷ ಜುಲೈನಲ್ಲಿ ಅಧಿಕಾರಿಗಳನ್ನು ಲಿಂಗ ಸಮಾನತೆಯ ದೃಷ್ಟಿಕೋನದಲ್ಲಿ ಹುದ್ದೆಯ ಹೆಸರಲ್ಲಿ ಸಂಬೋಧಿಸುವ ಸಂಪ್ರದಾಯವನ್ನು ತೊಡೆದು ಹಾಕಿತ್ತು. ಇವೆಲ್ಲದರಿಂದ ಪ್ರೇರಣೆಗೊಂಡು ನಾವು ಕೂಡ ಲಿಂಗ ಭೇದವಿಲ್ಲದೆ ಸಂಬೋಧಿಸುವ ಪದ್ಧತಿಯನ್ನು ನಮ್ಮ ಶಾಲೆಯಲ್ಲಿಯೂ ಅಳವಡಿಸಿಕೊಳ್ಳಲು ಯೋಚಿಸಿದೆವು ಎಂದು ಹೇಳಿದ್ದಾರೆ.

corona hubballi school

ಈ ಕ್ರಮವನ್ನು ಮಕ್ಕಳ ಪೋಷಕರೂ ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ. ಶಾಲೆಯಲ್ಲಿ ಅನುಸರಿಸಲಾಗುವ ಈ ಪದ್ಧತಿಯು ಲಿಂಗಾನುಸಾರ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆಯ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *