– ಪೊಲೀಸರಿಂದ ಸಿಬಿಐಗೆ ವರದಿ ಸಲ್ಲಿಕೆ
ತಿರುವನಂತಪುರಂ: ಕೇರಳದ (Kerala) ವಯನಾಡ್ ಜಿಲ್ಲೆಯ (Wayanad) ಕಾಲೇಜೊಂದರ ಹಾಸ್ಟೆಲ್‍ನಲ್ಲಿ ಪಶುವೈದ್ಯಕೀಯ ವಿದ್ಯಾರ್ಥಿಯ (Student)
ಶವ ಪತ್ತೆಯಾದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (Central Bureau of Investigation) ವಹಿಸಿಕೊಂಡಿದೆ. ವಿದ್ಯಾರ್ಥಿ ಸಿದ್ಧಾರ್ಥನ್ (20) ಎಂಬಾತನ ಮೃತದೇಹ ಫೆಬ್ರವರಿ 18 ರಂದು ಹಾಸ್ಟೆಲ್‍ನ ಸ್ನಾನಗೃಹದೊಳಗೆ ಪತ್ತೆಯಾಗಿತ್ತು. ಇದೀಗ ಹಿರಿಯ ವಿದ್ಯಾರ್ಥಿಗಳು ಹಾಗೂ ಸಹಪಾಠಿಗಳ ಕಿರುಕುಳದಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು (Police) ಸಿಬಿಐಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಸಿದ್ಧಾರ್ಥನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಹಿರಿಯ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳು 29 ಗಂಟೆಗಳ ಕಾಲ ನಿರಂತರವಾಗಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ವೈತಿರಿ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪ್ರಶೋಭ್ ಪಿವಿ ಅವರು, ಸಿಬಿಐಗೆ ನೀಡಿದ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹದಿಹರೆಯದ ಹುಡುಗರೇ ಇವಳ ಟಾರ್ಗೆಟ್ – ಸೆಕ್ಸ್‌ಗಾಗಿ 14 ವರ್ಷದ ಹುಡುಗಿಯಂತೆ ನಟಿಸಿದ್ದ ಮಾಯಗಾತಿ ಅರೆಸ್ಟ್!
- Advertisement
ಕೈ ಮತ್ತು ಬೆಲ್ಟ್ ಬಳಸಿ ನಿರಂತರವಾಗಿ ಸಿದ್ಧಾರ್ಥನ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ನಿರಂತರ ರ್ಯಾಗಿಂಗ್ ಮತ್ತು ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿ ಹಾಸ್ಟೆಲ್‍ನ ಬಾತ್‍ರೂಮ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ 20 ಜನರ ವಿರುದ್ಧ ವಯನಾಡ್‍ನ ವೈತಿರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದೀಗ ಕೇಂದ್ರದಿಂದ ಅಧಿಸೂಚನೆ ಪಡೆದ ಕೆಲವೇ ಗಂಟೆಗಳಲ್ಲಿ ಸಿಬಿಐ ಪ್ರಕರಣ ಕೈಗೆತ್ತಿಕೊಂಡಿದೆ.
- Advertisement
ಪ್ರಕರಣದ ಬಗ್ಗೆ ಮಾರ್ಚ್ 9 ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಬಿಐ ತನಿಖೆಗೆ ಭರವಸೆ ನೀಡಿದ್ದರು. ಇನ್ನೂ ಪ್ರಮುಖ ಕಡತಗಳು ಸಿಬಿಐಗೆ ನೀಡದ ಇರುವುದರಿಂದ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಸಿಬಿಐ ತನಿಖೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ. ಕಡತಗಳನ್ನು ಹಸ್ತಾಂತರಿಸದೆ ಸಾಕ್ಷ್ಯ ನಾಶಪಡಿಸಿದೆ ಎಂದು ವಿದ್ಯಾರ್ಥಿಯ ಕುಟುಂಬ ಆರೋಪಿಸಿದೆ.
ವಿದ್ಯಾರ್ಥಿಯ ತಂದೆ ಜಯಪ್ರಕಾಶ್, ಸಾಯುವ ಮೊದಲು ತನ್ನ ಮಗನಿಗೆ ಎಂಟು ತಿಂಗಳ ಕಾಲ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೇ ಎಸ್‍ಎಫ್‍ಐ ಮುಖಂಡರು ಹಲವು ತಿಂಗಳುಗಳಿಂದ ಕಾಲೇಜಿನಲ್ಲಿ ಕ್ಯಾಂಪ್ ಹಾಕಿದ್ದು, ಕೆಲವರು ನನ್ನ ಮಗನನ್ನು ಬಟ್ಟೆ ಬಿಚ್ಚಿ ಮಂಡಿಯೂರಿ ಕೂರಿಸಿದ್ದರು ಎಂದು ದೂರಿದ್ದಾರೆ.
ತಿರುವನಂತಪುರಂ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‍ಡಿಎ) ಅಭ್ಯರ್ಥಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar), ಸಿಬಿಐ ತನಿಖೆಯನ್ನು ತ್ವರಿತಗೊಳಿಸಲು ಕ್ರಮಕೈಗೊಳ್ಳುತ್ತೇವೆ ಎಂದು ವಿದ್ಯಾರ್ಥಿಯ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್ ಪಲ್ಟಿ- ಮೂವರ ದುರ್ಮರಣ, 38 ಮಂದಿಗೆ ಗಾಯ