ದ್ವಿಶತಕ ಸಿಡಿಸಿ ಸಚಿನ್, ಸೆಹ್ವಾಗ್ ಸಾಲಿಗೆ ಸೇರಿದ ಸಂಜು ಸ್ಯಾಮ್ಸನ್

Public TV
1 Min Read
SANJU SAMSON

ಪಣಜಿ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ತಂಡದ ಯುವ ಆಟಗಾರ ಸಂಜು ಸ್ಯಾಮ್ಸನ್ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದು, ಟೂರ್ನಿಯಲ್ಲಿ ದಾಖಲಾದ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟೂರ್ನಿಯ ಗ್ರೂಪ್ ‘ಎ’ ನಲ್ಲಿ ಗೋವಾ ತಂಡದ ಎದುರು ಸಂಜು ಸ್ಯಾಮ್ಸನ್ 129 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಗಳ ನೆರವಿನಿಂದ ಅಜೇಯ 212 ರನ್ ಗಳಿಸಿದ್ದಾರೆ. ಆ ಮೂಲಕ ಕಳೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತರಖಂಡ ಆಟಗಾರ ಕರಣ್‍ವೀರ್ ಕೌಶಾಲ್ 202 ರನ್ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲಿ 1 ಶತಕವೂ ದಾಖಲಿಸಿದ ಸಂಜು ಇದಕ್ಕೂ ಮುನ್ನ ನಡೆದ ಟೂರ್ನಿಯಲ್ಲಿ ಏಕೈಕ ಅರ್ಧ ಶತಕ ಗಳಿಸಿದ್ದರು.

ಇಂದಿನ ಪಂದ್ಯದಲ್ಲಿ ಕೇರಳ ತಂಡ ಮತ್ತೊಬ್ಬ ಆಟಗಾರ ಸಚಿನ್ ಬೇಬಿರೊಂದಿಗೆ ಸ್ಯಾಮ್ಸನ್ 338 ರನ್ ಗಳ ಜೊತೆಯಾಟ ನೀಡಿದ್ದು, ಪರಿಣಾಮ ಕೇರಳ ಪಂದ್ಯದಲ್ಲಿ ನಿಗದಿತ 50 ಓವರ್ ಗಳಲ್ಲಿ 377 ರನ್ ಪೇರಿಸಿತು. ಸಂಜುಗೆ ಸಾಥ್ ನೀಡಿದ ಸಚಿನ್ ಬೇಬಿ ಕೂಡ 135 ಎಸೆತಗಳಲ್ಲಿ 127 ರನ್ ಗಳಿಸಿದ್ದರು.

ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲಿ ಸಂಜು ಸಿಡಿಸಿದ ಮೊದಲ ದ್ವಿಶಕ ಇದಾಗಿದ್ದು, ಈ ಹಿಂದೆ ಸಚಿನ್, ಸೆಹ್ವಾಗ್, ರೋಹಿತ್ ಶರ್ಮಾ, ಶಿಖರ್ ಧವನ್, ಕರಣ್ ಕೌಶಾಲ್ ಬಳಿಕ ಸ್ಥಾನವನ್ನು ಸಂಜು ಸ್ಯಾಮ್ಸನ್ ಪಡೆದಿದ್ದಾರೆ.

SANJU a

Share This Article
Leave a Comment

Leave a Reply

Your email address will not be published. Required fields are marked *