ನವದೆಹಲಿ: ಕೇರಳ (Kerala) ರಾಜ್ಯದಲ್ಲಿ ಕೊರೊನಾ (Corona) ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದು ಕರ್ನಾಟಕದ ಗಡಿಭಾಗದಲ್ಲೂ ಆತಂಕ ಹೆಚ್ಚಾಗಿದೆ.
ಕಳೆದ ನವೆಂಬರ್ (November) ಒಂದೇ ತಿಂಗಳಲ್ಲಿ ಒಟ್ಟು 479 ಕೊರೊನಾ (Covid) ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಓರ್ವ ಸೋಂಕಿತ ಮೃತಪಟ್ಟಿದ್ದಾರೆ. ಅದರೆ ಡಿಸೆಂಬರ್ ತಿಂಗಳ ಮೊದಲ ಎಂಟು ದಿನವೇ ಬರೋಬ್ಬರಿ 825 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
Advertisement
Advertisement
Advertisement
ದೇಶದಲ್ಲಿ (India) ದಾಖಲಾದ ಒಟ್ಟು ಪ್ರಕರಣಗಳ ಪೈಕಿ 90% ಹೊಸ ಕೋವಿಡ್ ಪ್ರಕರಣಗಳು ಕೇರಳದಲ್ಲೇ ದಾಖಲಾಗಿದೆ. ಇದೀಗ ಪತ್ತೆಯಾಗುತ್ತಿರುವ ಸೋಂಕು ಕೋವಿಡ್ನ ಸಬ್ ವೇರಿಯಂಟ್ JN1 ಎಂದು ದೃಢಪಟ್ಟಿರುವುದರಿಂದ ಇದ ಅಪಾಯಕಾರಿಯಲ್ಲ ಹಾಗೂ ಸಾವುಗಳು ಕಡಿಮೆ ಎನ್ನಲಾಗಿದ್ದು, ಹೀಗಾಗಿ ಇದನ್ನು ನಿರ್ವಹಿಸಬಹುದೆಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಎಸ್ಬಿಐ MCLR ಏರಿಕೆ – ದುಬಾರಿಯಾಗಲಿದೆ EMI- ಎಷ್ಟಿತ್ತು? ಎಷ್ಟು ಏರಿಕೆ?
Advertisement
ದೇಶದಲ್ಲಿ ಶುಕ್ರವಾರ 237 ಕೊರೊನಾ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಒಟ್ಟು 1,296 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 5,33,310 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.