ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್‌ ಮಾಡ್ಕೊಂಡು ಬ್ಲ್ಯಾಕ್‌ಮೇಲ್‌ – ಪ್ರತಿಷ್ಠಿತ ದೇವಸ್ಥಾನದ ಅರ್ಚಕ ಅರೆಸ್ಟ್‌

Public TV
2 Min Read
bellandur Police

ಬೆಂಗಳೂರು: ವಾಟ್ಸಪ್‌ನಲ್ಲಿ ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್‌ (Video Record) ಮಾಡಿಕೊಂಡು ಬ್ಲ್ಯಾಕ್‌ ಮಾಡುತ್ತಿದ್ದ ಕೇರಳ ತ್ರಿಶೂರ್‌ನ ಪ್ರತಿಷ್ಠಿತ ದೇವಾಲಯದ ಅರ್ಚಕನನ್ನು ಬೆಳ್ಳಂದೂರು ಪೊಲೀಸರು (Bellandur Police) ಬಂಧಿಸಿದ್ದಾರೆ.

ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ (Priest) ಅರುಣ್ ಬಂಧಿತ ಆರೋಪಿ. ಪ್ರಕರಣ ಬೆಳಕಿಗೆ ಬಂದ ಬಳಿಕ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಇರಾನ್‌-ಇಸ್ರೇಲ್‌ ಸಂಘರ್ಷ ತೀವ್ರ – ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

phone mobile

ಏನಿದು ಅರ್ಚಕನ ಕಾಮದಾಟ?
ಮಹಿಳೆಯೊಬ್ಬರು (Bengalur Women) ತನಗೆ ಮಾಟಮಂತ್ರ ಮಾಡಿಸಿದ್ದಾರೆಂದು ದೇವಸ್ತಾನಕ್ಕೆ ತೆರಳಿದ್ದರು. ಈ ವೇಳೆ ದೇವಾಲಯದ ಅರ್ಚಕ ಅರುಣ್ ಪರಿಚಯ ಆಗಿತ್ತು. 24,000 ರೂ. ಕೊಟ್ಟರೆ ಪೂಜೆ ಮಾಡೋದಾಗಿ ಅರುಣ್ ಹೇಳಿದ್ದ. ಬಳಿಕ ಮಹಿಳೆ ನಂಬರ್ ಪಡೆದು ಹೇಳಿದ ದಿನ ಬರುವಂತೆ ಸೂಚನೆ ಕೊಟ್ಟಿದ್ದ. ಇದಾದ ಬಳಿಕ ಮಹಿಳೆಗೆ ತಡರಾತ್ರಿಯಲ್ಲಿ ನಿರಂತರ ವಾಟ್ಸಪ್ ಕರೆ ಮಾಡುತ್ತಿದ್ದ. ತಾನು ಬೆತ್ತಲೆಯಾಗಿ ನಿಂತು ವಿಡಿಯೋ ಕರೆ ಮಾಡುತ್ತಿದ್ದ. ಅಲ್ಲದೇ ನಿಮಗೆ ಮಾಡಿರುವ ಮಾಟ ಮಂತ್ರ ಪರಿಹಾರ ಆಗಬೇಕಾದ್ರೆ ಸಂಪೂರ್ಣ ಬೆತ್ತಲಾಗುವಂತೆ ಪೀಡಿಸುತ್ತಿದ್ದ. ಇದನ್ನೂ ಓದಿ: ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

mobile video

ಮಹಿಳೆ ಇದನ್ನ ನಿರಾಕರಿಸಿದ್ದಕ್ಕೆ ಬೆತ್ತಲಾಗಿಲ್ಲ ಅಂದ್ರೆ ನಿನ್ನ ಇಬ್ಬರು ಮಕ್ಕಳು ಸಾಯೋ ಹಾಗೆ ರಿಟರ್ನ್ ಪೂಜೆ‌ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದ. ಅರ್ಚಕನ ಬೆದರಿಕೆಯಿಂದ ಮಹಿಳೆ ಬೆತ್ತಲಾಗಿದ್ದಳು. ಬಳಿಕ ಬೆತ್ತಲೆ ಆಗಿರೋದನ್ನ ಅರ್ಚಕ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದ. ನಂತರ ಆ ವಿಡಿಯೋ ಇಟ್ಟುಕೊಂಡು ಕರೆದಾಗಲೆಲ್ಲ ಕೇರಳಕ್ಕೆ ಬರುವಂತೆ ಒತ್ತಾಯ ಮಾಡ್ತಿದ್ದ. ನೀನು ಬರುವಾಗ ಹೇಳು ರೂಂ ಬುಕ್‌ ಮಾಡ್ತೀನಿ ಅಂತ ಚಿತ್ರಹಿಂಸೆ ಕೊಟ್ತಿದ್ದ. ಇದರಿಂದ ಬೇಸತ್ತ ಮಹಿಳೆ ಅರ್ಚಕ ಅರುಣ್‌ ಹಾಗೂ ಮುಖ್ಯ ಅರ್ಚಕ ಉನ್ನಿ ದಾಮೋದರ್ ವಿರುದ್ಧ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಅಸಭ್ಯ ವರ್ತನೆ ಮತ್ತು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅರ್ಚಕ ಅರುಣ್‌ನನ್ನ ಬಂಧಿಸಿದ್ದಾರೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

Share This Article