ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರಂನ ನೇಪಿಯರ್ ಮ್ಯೂಸಿಯಂ ಪಾರ್ಕ್‍ನಲ್ಲಿ ಕುಳಿತಿದ್ದ ಪ್ರೇಮಿಗಳಿಗೆ ಅವಾಜ್ ಹಾಕಿದ್ದ ಮಹಿಳಾ ಪೇದೆಗಳಿಗೆ ಪ್ರೇಮಿಗಳು ಬೆವರಿಳಿಸಿದ ಘಟನೆ ನಡೆದಿದೆ.
ಪಾರ್ಕ್‍ನಲ್ಲಿ ತಮ್ಮ ಪಾಡಿಗೆ ತಾವು ಕುಳಿತಿದ್ದ ಪ್ರೇಮಿಗಳ ಬಳಿ ಬಂದ ಮಹಿಳಾ ಪೇದೆಗಳು ನಿಮಗೆ ಮದ್ವೆಯಾಗಿದ್ಯಾ.. ಏನ್ ಮಾಡ್ತಿದ್ದೀರಿ… ಅಂತೆಲ್ಲಾ ಯುವತಿಯ ಬಳಿ ಅಸಂಬಂದ್ಧ ಪ್ರಶ್ನೆಗಳನ್ನು ಕೇಳಿ ನಡೀರಿ ಸ್ಟೇಷನ್‍ಗೆ ಎಂದು ದರ್ಪ ತೋರಿಸಿದ್ದಾರೆ. ಈ ವೇಳೆ ಸಿಟ್ಟುಗೊಂಡ ಪ್ರೇಮಿಗಳು ಮಹಿಳಾ ಪೇದೆ ವಿರುದ್ಧ ಬಿದ್ದು, ಏನ್ ನಾವ್ ಕಿಸ್ ಕೊಟ್ಕೊತಿದ್ದೀವಾ.. ಇನ್ನೊಂದು ಮಾಡ್ತಿದ್ದೀವಾ.. ಸುಮ್ನೆ ಜೊತೆಲಿ ಕುಳಿತಿದ್ವಿ.. ಇಲ್ಲಿ ನಮ್ಮ ತಪ್ಪೇನು ತೋರಿಸಿ ಎಂದಾಗ ಪೇದೆಗಳು ಗಪ್‍ಚುಪ್ ಆಗಿದ್ರು.
- Advertisement -
ಇದನ್ನೆಲ್ಲ ಫೇಸ್‍ಬುಕ್ ಲೈವ್‍ನಲ್ಲಿ ತೋರಿಸಿದ್ದಾರೆ ಯುವ ಪ್ರೇಮಿಗಳು. ಆದ್ರೂ ಪಟ್ಟುಬಿಡದ ಆ ಮಹಿಳಾ ಪೇದೆ ಇಬ್ಬರು ಠಾಣೆಗೆ ಕರೆದೊಯ್ದು 200 ರೂಪಾಯಿ ದಂಡ ವಿಧಿಸಿದ್ದಾರೆ. ಮಾತ್ರವಲ್ಲದೇ ಐಪಿಸಿ ಸೆಕ್ಷನ್ 290 ಅಡಿಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ. ಆದ್ರೆ ತಾವಿಬ್ಬರು ಶೀಘ್ರದಲ್ಲೇ ಮದುವೆಯಾಗೋದಾಗಿ ಯುವ ಪ್ರೇಮಿಗಳು ಹೇಳ್ಕೊಂಡಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಕೇರಳ ಪೊಲೀಸ್ ವರಿಷ್ಠಾಧಿಕಾರಿ ಲೋಕನಾಥ್ ಬೆಹರಾ ತನಿಖೆಗೆ ಆದೇಶಿಸಿದ್ದಾರೆ.
- Advertisement -