ತಿರುವನಂತಪುರಂ: ಸ್ನೇಹಿತೆಯ ಪತಿಯ ಚಲನವಲನಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಆರೋಪದಡಿ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳ ತಿರುವನಂತಪುರಂ ನಲ್ಲಿ ನಡೆದಿದೆ.
ಸ್ನೇಹಿತೆಯ ಪತಿಯ ಮೊಬೈಲ್ ನಲ್ಲಿ ರಿಯಲ್ ಟೈಮ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಅಳವಡಿಸಿದ ಬ್ಯಾಂಕ್ ಉದ್ಯೋಗಿ ಆತನ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಅಜಿತ್ ಎಸ್ (32) ಎಂಬಾತ ಟ್ರ್ಯಾಕ್ ವ್ಯೂ ಎಂಬ ಮೊಬೈಲ್ ಸೆಕ್ಯೂರಿಟಿ ಅಪ್ಲಿಕೇಶನ್ ಬಳಸಿ ಸ್ನೇಹಿತೆಯ ಪತಿಯ ಚಲನವಲನಗಳನ್ನು ದಾಖಲಿಸುತ್ತಿದ್ದ. ಈ ಮೂಲಕ ಸ್ನೇಹಿತೆಯ ಪತಿಯ ಲೋಕೇಶನ್, ಮೊಬೈಲ್ ನಲ್ಲಿ ದಾಖಲಾಗುವ ವಿಡಿಯೋ, ಫೋಟೋ ಮತ್ತು ಕಾಲ್ ರೆರ್ಕಾಡಿಂಗ್ ಮಾಹಿತಿಯನ್ನು ಪಡೆಯುತ್ತಿದ್ದರು.
Advertisement
ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಿದ ಕೊಚ್ಚಿ ಪೊಲೀಸ್ ಕಮಿಷನರ್ ಹಿಮೇಂದ್ರನಾಥ್, ಕೇರಳದಲ್ಲಿ ಇಂತಹ ಪ್ರಕರಣ ಇದೇ ಮೊದಲ ಬಾರಿಗೆ ವರದಿಯಾಗಿದೆ. ಸದ್ಯ ಬಂಧಿಸಲಾಗಿರುವ ವ್ಯಕ್ತಿ ವಿಚಾರಣೆ ನಡೆಯುತ್ತಿದ್ದು, ಆತ ಈ ರೀತಿಯ ಮೊಬೈಲ್ ಅಪ್ಲಿಕೇಶನ್ ಬಳಸಿ ಮತ್ತಷ್ಟು ಜನರನ್ನು ಟ್ರ್ಯಾಕ್ ಮಾಡಿರುವ ಶಂಕೆ ಇದ್ದು, ಈ ಕುರಿತು ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಅದ್ವೈತ್ ಆರ್ ವಿ (25) ಹಾಗೂ ಶೃತಿ ದಂಪತಿಗಳಾಗಿದ್ದು, ಇಬ್ಬರ ದಾಂಪತ್ಯದಲ್ಲಿ 7 ಲಕ್ಷ ರೂ, ಹಣದ ಬಗ್ಗೆ ಗೊಂದಲ ನಿರ್ಮಾಣವಾಗಿತ್ತು. ಈ ಕಾರಣದಿಂದ ಶೃತಿ ಗೆ ಸಹಾಯ ಮಾಡಲು ಸ್ನೇಹಿತ ಅಜಿತ್ ಸಹಾಯ ಪಡೆದ ಶೃತಿ ಪತಿ ಅದ್ವೈತ್ ಮೊಬೈಲ್ ಫೋನ್ ನಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಸಿದ್ದಳು. ಈ ವೇಳೆ ಶೃತಿ 15 ದಿನಗಳು ಪತಿಯ ಮನೆ ತೊರೆದು ಹೋಗಿದ್ದಳು. ಇದಾದ ಬಳಿಕ ಪತ್ನಿ ಶೃತಿ ಮನೆಯಲ್ಲಿ ಇಲ್ಲದಿದ್ದರೂ ಪತಿ ಎಲ್ಲಾ ಚಲನವಲನ ಬಗ್ಗೆ ಮಾಹಿತಿ ನೀಡಿ ಪ್ರಶ್ನಿಸುತ್ತಿದ್ದಳು ಎಂದು ಅದ್ವೈತ್ ತಿಳಿಸಿದ್ದಾರೆ.
ನಾನು ಭೇಟಿ ನೀಡಿದ್ದ ಸ್ಥಳ, ತೆಗೆದುಕೊಂಡ ಆಹಾರ ಹಾಗೂ ಮನೆಯ ರೂಮ್ ನಲ್ಲಿದ್ದ ವೇಳೆ ಏನು ಮಾಡುತ್ತಿದೆ ಎಲ್ಲಾ ಮಾಹಿತಿಯನ್ನು ನೀಡುತ್ತಿದ್ದಳು. ಈ ವೇಳೆ ನನಗೆ ಶಂಕೆ ವ್ಯಕ್ತವಾಗಿ ರೂಮ್‍ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಳಾ ಎನ್ನುವುದರ ಬಗ್ಗೆಯೂ ಪರಿಶೀಲಿಸಿದೆ. ಬಳಿಕ ಐಟಿ ತಜ್ಞರ ಬಳಿ ನನ್ನ ಮೊಬೈಲ್ ನೀಡಿ ಪರಿಶೀಲನೆ ನಡೆಸಿದ ವೇಳೆ ಪತ್ನಿಯ ಕೃತ್ಯ ತಿಳಿಯಿತು. ಪತ್ನಿ ಸ್ನೇಹಿತನ ಸಹಾಯದಿಂದ ನನ್ನ ಮೊಬೈಲ್ ಅನ್ನು ಆಕೆ ಟ್ರ್ಯಾಕ್ ಮಾಡುತ್ತಿದ್ದಳು ಎಂದು ಅದ್ವೈತ್ ತಿಳಿಸಿದ್ದಾರೆ.
ಸದ್ಯ ಬಂಧಿತ ಅಜಿತ್ ನೀಡಿರುವ ಮಾಹಿತಿ ಅನ್ವಯ, ಶೃತಿ ಪತಿಯ ಮೇಲೆ ಅನುಮಾನದಿಂದ ಅವರ ಎಲ್ಲಾ ಚಲನವಲನ ಬಗ್ಗೆ ಮಾಹಿತಿ ಪಡೆಯಲು ಕೇಳಿದ್ದರು. ಈ ಮೂಲಕ ಸಂಗ್ರಹಿಸಿದ ಮಾಹಿತಿ ಅನ್ವಯ ಪತಿಯ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಲು ಬಳಕೆ ಮಾಡುವ ಉದ್ದೇಶವಿತ್ತು ಎಂದು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿಯ ಈ ಕೃತ್ಯದಿಂದ ಅಘಾತಕ್ಕೆ ಒಳಗಾಗಿರುವ ಅದ್ವೈತ್ ಯಾವ ಉದ್ದೇಶದಿಂದ ಈ ರೀತಿ ನಡೆಸಿದ್ದಾಳೆ ಎಂಬುದು ತಿಳಿಯುತ್ತಿಲ್ಲ. ಇದು ನಮ್ಮ 6 ವರ್ಷದ ಮಗಳ ಜೀವನವನ್ನು ನಾಶ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ರ್ಯಾಕ್ ವ್ಯೂ ಹೇಗೆ ಕಾರ್ಯನಿರ್ವಹಿಸುತ್ತದೆ:
ಟ್ರ್ಯಾಕ್ ವ್ಯೂ ಎಂಬ ಮೊಬೈಲ್ ಆ್ಯಪ್ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಬಳಕೆ ಮಾಡಲಾಗುತ್ತದೆ. ಈ ಆ್ಯಪನ್ನ ವ್ಯಕ್ತಿಯ ಮೊಬೈಲ್ ನಲ್ಲಿ ಅಳವಡಿಸಿದರೆ ಆತ ಮೊಬೈಲ್ ಮೂಲಕ ನಡೆಸುವ ಎಲ್ಲಾ ಮಾಹಿತಿ ಸಂಗ್ರಹಿಸಬಹುದಾಗಿದೆ.
ಮುಖ್ಯವಾಗಿ ವ್ಯಕ್ತಿಯ ಲೋಕೇಶನ್ ಅನ್ನು ಮೊಬೈಲ್ ಜಿಪಿಎಸ್ ಆಫ್ ಇದ್ದರೂ ಟ್ರ್ಯಾಕ್ ಮಾಡಬಹುದು. ಗೂಗಲ್ ಮ್ಯಾಪ್ ಬಳಸಿ ಆತನ ಸ್ಥಳವನ್ನು ನಿಖರವಾಗಿ ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೇ ಈ ಆಪ್ ಮೂಲಕ 6 ತಿಂಗಳ ಕಾಲ ಮೊಬೈಲ್ ಹಿಸ್ಟರಿಯನ್ನು ಬ್ಯಾಕಪ್ ಮಾಡಬಹುದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews