ಮನೆಯ ಟೆರೇಸ್‌ ಮೇಲಿಂದ ಅಣ್ಣನ ಮೇಲೆ ಬಿದ್ದ ತಮ್ಮ – ಮುಂದೇನಾಯ್ತು ನೋಡಿ? ವೀಡಿಯೋ ವೈರಲ್

Public TV
1 Min Read
KERALA BROTHERS

ತಿರುವನಂತಪುರಂ: ಮನೆಯ ಟೆರೇಸ್‌ ಕ್ಲೀನ್ ಮಾಡುತ್ತಿದ್ದ ತಮ್ಮ ಮೇಲಿಂದ ಕೆಳಗಿದ್ದ ಅಣ್ಣನ ಮೇಲೆ ಬಿದ್ದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

KERALA BROTHERS 2

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಣ್ಣ, ತಮ್ಮ ಸೇರಿ ಮನೆಯ ಟೆರೇಸ್‌ ಕ್ಲೀನ್ ಮಾಡುತ್ತಿದ್ದ ವೇಳೆ ಟೆರೇಸ್‌ ಮೇಲಿದ್ದ ತಮ್ಮ ಏಕಾಏಕಿ ಕಾಲು ಜಾರಿ ಬಿದ್ದಿದ್ದಾನೆ. ಬೀಳುತ್ತಿದ್ದಂತೆ ಕೆಳಗಿದ್ದ ಅಣ್ಣ ಹಿಡಿಯಲು ಪ್ರಯತ್ನಿಸುತ್ತಾನೆ. ಈ ವೇಳೆ ಇಬ್ಬರು ನೆಲಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ- ಮಗುವಿಗೆ ಜನ್ಮ ನೀಡಿದ 13ರ ಬಾಲಕಿ

ಬಳಿಕ ತಮ್ಮ ತಕ್ಷಣ ಮೇಲೆದ್ದರೆ ಅಣ್ಣನಿಗೆ ಏಟು ಬಿದ್ದು ಕೆಲಕಾಲ ಮೇಲೇಳಾಗದೆ ಅಲ್ಲೇ ಕೂತಿದ್ದಾನೆ. ಬಳಿಕ ಚೇತರಿಕೆ ಕಂಡಿದ್ದು, ಪ್ರಾಣಾಪಾಯದಿಂದ‌ ಅಣ್ಣ-ತಮ್ಮ ಪಾರಾಗಿದ್ದಾರೆ. ಇದು ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಹರಿದ ಧ್ವಜಗಳನ್ನು ಹಾರಿಸಬೇಕಾ? ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ವಾ?: ಮುತಾಲಿಕ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *