ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ; ಕರ್ನಾಟಕ ಸರ್ಕಾರದಿಂದ ಪರಿಹಾರ – ಈಶ್ವರ್‌ ಖಂಡ್ರೆ ಹೇಳಿದ್ದೇನು?

Public TV
1 Min Read
Eshwara Khandre

ಬೀದರ್: ಕೇರಳದಲ್ಲಿ (Kerala) ಆನೆ ತುಳಿತದಿಂದಾಗಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಕೇರಳದ ವ್ಯಕ್ತಿ ಮೃತಪಟ್ಟಿರುವುದಕ್ಕೆ ಕರ್ನಾಟಕ ಸರ್ಕಾರದಿಂದ ಪರಿಹಾರ ಘೋಷಿಸಲಾಗಿದೆ. ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಅರಣ್ಯ ಸಚಿವ ಈಶ್ವರ್‌ ಖಂಡ್ರೆ (Eswhar Khandre) ಸ್ಪಷ್ಟನೆ ನೀಡಿದ್ದಾರೆ.

ನಾವು ಸಾವಿನ ಮೇಲೆ ರಾಜಕೀಯ ಮಾಡೋರಲ್ಲ. ಕೇರಳದಲ್ಲಿ ಒಂದು ಸಾವಾಗಿದೆ. ಹೀಗಾಗಿ ಪರಿಹಾರ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಕೇರಳದ ವೈನಾಡಿನಲ್ಲಿ ಆನೆ ತುಳಿತಕ್ಕೆ ಬಲಿಯಾದ ವ್ಯಕ್ತಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡುವ ವಿಚಾರವನ್ನು ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ನೂರಾರು ಕಾಂಡೋಮ್‌ ಬಾಕ್ಸ್‌ಗಳು ಪತ್ತೆ!

rahul gandhi

ಬೀದರ್‌ನಲ್ಲಿ ‘ಪಬ್ಲಿಕ್ ಟಿವಿ’ಗೆ ಎಕ್ಸ್‌ಕ್ಲೂಸಿವಾಗಿ ಪ್ರತಿಕ್ರಿಯೆ ನೀಡಿದ ಅರಣ್ಯ ಈಶ್ವರ್ ಖಂಡ್ರೆ, ಪ್ರಾಣಿ ಸಂಘರ್ಷ ಬಹಳಷ್ಟು ದಿನಗಳಿಂದ ಇದ್ದು, ಆನೆ ತುಳಿತದಿಂದ ಹಾಗೂ ಕಾಡು ಪ್ರಾಣಿಗಳು ಅರಣ್ಯದಿಂದ ಹೊರಗಡೆ ಬಂದು ವ್ಯಕ್ತಿಗಳು ಸಾವನ್ನಪ್ಪಿದ್ದು ನೋಡಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಆನೆಗೆ ನಾವು ರೇಡಿಯೋ ಕಾಲರ್ ಹಾಕಿದ್ದೆವು. ಆ ಆನೆ ಬಂಡೀಪುರದಿಂದ ಕೇರಳದ ವೈನಾಡಿಗೆ ಹೋಗಿತ್ತು. ಅಲ್ಲಿ ಆನೆ ತುಳಿತಕ್ಕೆ ಅಜೀಶ್ ಎಂಬ ವ್ಯಕ್ತಿಯ ಸಾವಾಗಿದೆ. ನಮ್ಮ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ಮೇರೆಗೆ ಸಿಎಂ ಸಿದ್ದರಾಮಯ್ಯನವರ ಅನುಮೋದನೆ ಪಡೆದು ಕೇರಳದ ವ್ಯಕ್ತಿಗೆ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲು; ಅಧಿಕಾರಿಯ ವಿರುದ್ಧ ಕ್ರಮ ವಹಿಸಿ: ಅಶೋಕ್ ಒತ್ತಾಯ

ಪರಿಹಾರ ಘೋಷಣೆ ಮಾಡಿದ್ದೇವೆ. ಶೀಘ್ರವೇ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

Share This Article