ತಿರುವನಂತಪುರಂ: ವಿಶ್ವದಾದ್ಯಂತ ಕೊರೊನಾ ವೈರಸ್ ಭಯದ ವಾತಾವರಣ ಉಂಟು ಮಾಡಿದೆ. ಆದರೆ ಕೇರಳದ ಕೊಚ್ಚಿಯಿಂದ 40 ಕಿ.ಮೀ ದೂರದ ಹಳ್ಳಿಯಲ್ಲಿ ಕಳೆದ ಒಂದು ವರ್ಷದಿಂದ ಇರುವ ಕೊರೊನಾ ಟೆಕ್ಸ್‌ಟೈಲ್ ಎಂಬ ಅಂಗಡಿಯೊಂದು ಈಗ ಭಾರೀ ಸುದ್ದಿಯಲ್ಲಿದೆ.
ತನ್ನ ಹೆಸರಿನಿಂದಾಗಿ ಕೊಚ್ಚಿ ಸಮೀಪದ ಕೊರೊನಾ ಟೆಕ್ಸ್‌ಟೈಲ್ ಇದ್ದಕ್ಕಿದ್ದಂತೆ ಭಾರೀ ಜನಪ್ರಿಯವಾಗಿದೆ. ಕೆಲವರು ಈಗ ಅಂಗಡಿಯ ಮುಂದೆ ನಿಂತು ದೂರದಿಂದ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಜನರು ಅಂಗಡಿಯ ಹೆಸರನ್ನು ನೋಡಿ ಮುಗುಳ್ನಗೆಯೊಂದಿಗೆ ಮುಂದೆ ಸಾಗುತ್ತಿದ್ದಾರಂತೆ. ಇದನ್ನೂ ಓದಿ: ಬೆಂಗಳೂರಿನಿಂದ ಮಡಿಕೇರಿಗೆ ರಾಜಹಂಸದಲ್ಲಿ ತೆರಳಿದ್ದ ಕೊರೊನಾ ಪೀಡಿತ
Advertisement
Advertisement
ಅಂಗಡಿ ಮಾಲೀಕ ಫರಿದ್ ಪ್ರಕಾರ, ಅವರು ನಿಘಂಟಿನಲ್ಲಿ ಹೆಸರನ್ನು ನೋಡಿ ಅಂಗಡಿಗೆ ಇಟ್ಟಿದ್ದರು. ಆದರೆ ಮುಂದೊಂದುದಿನ ಈ ಹೆಸರಿನ ವೈರಸ್ ಕೂಡ ಬರುತ್ತದೆ ಎನ್ನುವುದನ್ನು ಭಾವಿಸಿರಲಿಲ್ಲವಂತೆ. ಸದ್ಯ ಅವರು ಗ್ರಾಹಕರಿಗೆ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಅಂಗಡಿಯಲ್ಲಿ ಇಟ್ಟುಕೊಂಡಿದ್ದಾರೆ. ಯಾರೇ ಅಂಗಡಿಗೆ ಪ್ರವೇಶಿಸಿದರೂ ಅವರಿಗೆ ಹ್ಯಾಂಡ್ ಸ್ಯಾನಿಟೈಜರ್ ನೀಡುತ್ತಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಫರಿದ್, ‘ಜನರು ಅಂಗಡಿಯ ಹತ್ತಿರ ಬಂದು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಕೆಲವರು ನನ್ನನ್ನು ನೋಡಿ ನಗುತ್ತಾರೆ. ಜನರು ರೈಲುಗಳಿಂದ ಹೊರಬಂದಾಗ ನಮ್ಮ ಅಂಗಡಿಯ ಹೆಸರನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಕೆಲವರು ಕಾರನ್ನು ನಿಲ್ಲಿಸಿ ಮತ್ತೆ ಮತ್ತೆ ನೋಡುತ್ತಾರೆ. ಕೊರೊನಾ ವೈರಸ್ ಹರಡಿದ ನಂತರ ನಾನು ಕೂಡ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಪ್ರಾರಂಭಿಸಿದೆ ಎಂದು ಎಂದು ತಿಳಿಸಿದ್ದಾರೆ.