ತಿರುವನಂತಪುರಂ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವಾಗ ವಿವಾದಾತ್ಮಕ ಅಭಿಪ್ರಾಯಪಟ್ಟಿದ್ದ ಕೊಯಿಕ್ಕೋಡ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ನ್ಯಾಯಾಧೀಶ ಎಸ್.ಕೃಷ್ಣ ಕುಮಾರ್ ಅವರನ್ನು ಕೊಲ್ಲಂ ಜಿಲ್ಲೆಯ ಕಾರ್ಮಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ವರ್ಗಾವಣೆ ಪಟ್ಟಿಯಲ್ಲಿ ಮೂವರು ಜಿಲ್ಲಾ ಮಟ್ಟದ ನ್ಯಾಯಾಂಗ ಅಧಿಕಾರಿಗಳ ವರ್ಗಾವಣೆ ಕೂಡ ಸೇರಿದೆ. ಇದನ್ನೂ ಓದಿ: ಪರಿಶಿಷ್ಟ ಜಾತಿಗೆ ಸೇರಿದವಳೆಂದು ತಿಳಿದು ಆಕೆ ದೇಹ ಮುಟ್ಟುತ್ತಾನೆಂಬುದು ನಂಬಲಸಾಧ್ಯ: ಕೋರ್ಟ್
ಬರಹಗಾರ ಹಾಗೂ ಸಾಹಿತಿ ಸಿವಿಕ್ ಚಂದ್ರನ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದ ತೀರ್ಪನ್ನು ನ್ಯಾಯಾಧೀಶ ಎಸ್.ಕೃಷ್ಣ ಕುಮಾರ್ ಅವರು ನೀಡಿದ್ದರು.
ʼಮಹಿಳೆಯು ಲೈಂಗಿಕ ಪ್ರಚೋದನೆಯ ಬಟ್ಟೆ ತೊಟ್ಟಿದ್ದರು ಎಂದು ಹೇಳಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ್ದರು. ಈ ತೀರ್ಪು ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಇದನ್ನೂ ಓದಿ: ಆಕೆಯ ಸಹಚರರೇ ಕೊಲೆ ಮಾಡಿದ್ದಾರೆ- ಸೋನಾಲಿ ಪೋಗಟ್ ಸಹೋದರ ದೂರು
ಆರೋಪಿಯು ಜಾತಿ ವ್ಯವಸ್ಥೆಗೆ ವಿರುದ್ಧವಾಗಿದ್ದಾರೆ. ಹೀಗಿರುವಾಗ ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದ್ದಾಳೆಂಬುದನ್ನು ತಿಳಿದು ಆಕೆ ಮೈ ಮುಟ್ಟಿದ್ದಾರೆಂಬುದನ್ನು ನಂಬಲು ಸಾಧ್ಯವಿಲ್ಲ. ಅಲ್ಲದೇ ಸಮಾಜದಲ್ಲಿ ಒಳ್ಳೆಯ ಹೆಸರು ಹೊಂದಿರುವ ವ್ಯಕ್ತಿ ವಿರುದ್ಧ ಇಂತಹ ಆರೋಪ ಹೊರಿಸುವುದು ಸರಿಯಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದರು.
ಚಂದ್ರನ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ಆದೇಶಕ್ಕೆ ಬುಧವಾರ ಕೇರಳ ಹೈಕೋರ್ಟ್ ತಡೆ ನೀಡಿದೆ. ಆದರೂ ಚಂದ್ರನ್ ಅವರನ್ನು ಬಂಧಿಸಬಾರದು ಎಂದು ಸೂಚಿಸಿದೆ.