ಬೆಂಗಳೂರು: ನಕಲಿ ಸಿಗರೇಟ್ (Fake Cigarettes) ಸರಬರಾಜು ಮಾಡುತ್ತಿದ್ದ ಕೇರಳ ಗ್ಯಾಂಗ್‌ವೊಂದನ್ನು (Kerala Gang) ಪೊಲೀಸರು ಬಂಧಿಸಿದ್ದು, ಕೋಟಿ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ.
ಪ್ರತಿಷ್ಟಿತ ಲೈಟ್ಸ್ ಬ್ರ್ಯಾಂಡ್ ನಕಲು ಮಾಡಿ ಮಾರಾಟ ಮಾಡುತ್ತಿದ್ದ ಮೂರು ಲಕ್ಷ ಸಿಗರೇಟ್‌ಗಳನ್ನು ಸೀಜ್ ಮಾಡಲಾಗಿದೆ. ಬಾಂಗ್ಲಾದೇಶ ಮೂಲಕ ನಕಲಿ ಸಿಗರೇಟ್ಸ್ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್ ಹೂವು
ನಿಶಾಂತ್, ಶಕೀಲ್, ಶಬ್ಬೀರ್ ಬಂಧಿತ ಆರೋಪಿಗಳು. ಕೇರಳ ಮೂಲದ ಬಂಧಿತ ಆರೋಪಿ ಶಕೀಲ್ ನಕಲಿ ಸಿಗರೇಟ್ ಜಾಲದ ಕಿಂಗ್ ಪಿನ್ ಆಗಿದ್ದ. ಆರೋಪಿಗಳ ವಿರುದ್ಧ ಕುಮಾರಸ್ವಾಮಿ ಲೇಔಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಐಶ್ವರ್ಯಗೌಡ ಉಡುಗೊರೆಯಾಗಿ ಕೊಟ್ಟಿದ್ದ ಕಾರು ಸೀಜ್