Ranji Trophy | 74 ವರ್ಷಗಳ ಬಳಿಕ ಮೈಲುಗಲ್ಲು – ಹೆಲ್ಮೆಟ್‌ನಿಂದ ರಣಜಿ ಫೈನಲ್‌ ತಲುಪಿದ ಕೇರಳ!

Public TV
2 Min Read
Kerala Ranaji Team

– 2 ರನ್‌ ಹಿನ್ನಡೆಯಿಂದ ಗುಜರಾತ್‌ಗೆ ನಿರಾಸೆ – ಸೆಮಿಸ್‌ ಪಂದ್ಯ ಡ್ರಾನಲ್ಲಿ ಅಂತ್ಯ

ಅಹಮದಾಬಾದ್: ರಣಜಿ ಟ್ರೋಫಿ (Ranji Trophy) ಸೆಮಿ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿದ ಕೇರಳ ತಂಡ (Kerala Team) 74 ವರ್ಷಗಳ ನಂತರ ಫೈನಲ್‌ ತಲುಪಿದ ಸಾಧನೆ ಮಾಡಿದೆ. ಕೊನೇ ಕ್ಷಣದಲ್ಲಿ ಹೆಲ್ಮೆಟ್‌ ಸಹಾಯದಿಂದ ಸಿಕ್ಕ ಕ್ಯಾಚ್‌ ಕೇರಳ ತಂಡವನ್ನು ಫೈನಲ್‌ ತಲುಪುವಂತೆ ಮಾಡಿದೆ. ಆದ್ರೆ 2 ರನ್‌ಗಳ ಹಿನ್ನಡೆಯಿಂದಾಗಿ ಗುಜರಾತ್‌ ತಂಡದ (Gujarat team) ಫೈನಲ್‌ ಕನಸು ಭಗ್ನವಾಗಿದೆ.

ಇನ್ನಿಂಗ್ಸ್‌ ಕೊನೆಯಲ್ಲಿ ಏನಾಯ್ತು?
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಸೆಮಿ ಫೈನಲ್‌ ಪಂದ್ಯ ನಡೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇರಳ ತಂಡ 187 ಓವರ್‌ಗಳಲ್ಲಿ 457 ರನ್ ಗಳಿಸಿತ್ತು. 174.3 ಓವರ್‌ಗಳಲ್ಲಿ 455 ರನ್‌ ಗಳಿಸಿದ್ದ ಗುಜರಾತ್‌ 9 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಇನ್ನಿಂಗ್ಸ್‌ ಮುನ್ನಡೆ ಕಾಯ್ದುಕೊಳ್ಳಲು ಕೇವಲ 2 ರನ್‌ ಬೇಕಿತ್ತು. ಇತ್ತ ಆದಿತ್ಯ ಸರ್ವತೇ ಬೌಲಿಂಗ್‌ನಲ್ಲಿದ್ದರೆ, ಬ್ಯಾಟರ್‌ ಅರ್ಜಾನ್ ನಾಗ್ವಾಸ್ವಾಲ್ಲಾ ಕ್ರೀಸ್‌ನಲ್ಲಿದ್ದರು. 175ನೇ ಓವರ್‌ನ 4ನೇ ಎಸೆತವನ್ನು ಬೌಂಡರಿ ಬಾರಿಸಲು ಅರ್ಜಾನ್‌ ಯತ್ನಿಸಿದರು. ಈ ವೇಳೆ ಮುಂಭಾಗದಲ್ಲಿದ್ದ ಶಾರ್ಟ್‌ ಲೆಗ್‌ ಫೀಲ್ಡರ್‌ನ ಹೆಲ್ಮೆಟ್‌ಗೆ ಬಡಿದ ಚಂಡು ನೇರವಾಗಿ ಸ್ಲಿಪ್‌ ಫೀಲ್ಡರ್‌ ಕೈ ಸೇರಿತು. ಅಂತಿಮವಾಗಿ ಗುಜರಾತ್‌ 174.4 ಓವರ್‌ಗಳಲ್ಲಿ ಆಲೌಟ್‌ ಆಗಿ ಫೈನಲ್‌ನಿಂದ ಹೊರಗುಳಿಯಿತು.

ಸೆಮಿಸ್‌ನ 5ನೇ ದಿನವಾದ ಇಂದು ಉಭಯ ತಂಡಗಳಿಗೆ 2ನೇ ಇನ್ನಿಂಗ್ಸ್ ಬಾಕಿಯಿತ್ತು. ತನ್ನ ಸರದಿಯ 2ನೇ ಇನ್ನಿಂಗ್ಸ್‌ ಆರಂಭಿಸಿದ ಕೇರಳ ದಿನದ ಅಂತ್ಯಕ್ಕೆ 46 ಓವರ್‌ಗಳಲ್ಲಿ 4 ವಿಕೆಟ್‌ಗೆ 114 ರನ್‌ ಗಳಿಸಿತ್ತು. ಗುಜರಾತ್‌ಗೆ ಬ್ಯಾಟಿಂಗ್‌ ಮಾಡಲು ಅವಕಾಶ ಸಿಗದೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಹಾಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿದ ಕೇರಳ ತಂಡ ರಣಜಿ ಫೈನಲ್‌ ಪ್ರವೇಶಿಸಿತು.

Kerala Ranaji Team 2

ಸೆಮಿಸ್‌ ಫಲಿತಾಂಶ ನಿರ್ಧಾರವಾಗಿದ್ದು ಹೇಗೆ?
ಸಹಜವಾಗಿ ರೌಂಡ್ ರಾಬಿನ್ (ಲೀಗ್ ಸುತ್ತಿನ ಪಂದ್ಯ) ಪಂದ್ಯಗಳು 4 ದಿನ ನಡೆಯುತ್ತದೆ. ನಾಕೌಟ್ ಪಂದ್ಯಗಳು ಮಾತ್ರ ಟೆಸ್ಟ್ ಕ್ರಿಕೆಟ್‌ನಂತೆ 5 ದಿನ ಇರಲಿದೆ. ನಾಕೌಟ್ ಪಂದ್ಯದಲ್ಲಿ ಫಲಿತಾಂಶ ಹೊರಬೀಳದಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್ ಮುನ್ನಡೆ ಸಾಧಿಸಿದ ಕೇರಳ ತಂಡ ಫೈನಲ್ ತಲುಪಲಿದೆ.

Share This Article