ತಿರುವನಂತಪುರಂ: ಕೇರಳದಲ್ಲಿ ಮಳೆ ನಿಂತು ಪ್ರವಾಹ ಇಳಿಮುಖವಾಗಿದ್ದರೂ ಅಲ್ಲಿನ ಜನರ ನೋವು ಮಾತ್ರ ಕಡಿಮೆಯಾಗಿಲ್ಲ. ಇದೇ ವೇಳೆ ರಕ್ಷಣಾ ಕಾರ್ಯವೂ ಮುಂದುವರಿದಿದ್ದು, ಯೋಧರು ಮನೆಯೊಂದರ ಮಹಡಿಯಲ್ಲಿ ಸಿಲುಕಿದ್ದ ವಿಕಲಚೇತರೊಬ್ಬರನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ್ದಾರೆ.
ಸದ್ಯ ಈ ವಿಡಿಯೋವನ್ನು ಸೇನೆ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮನೆಯ ಮಹಡಿಯಲ್ಲಿದ್ದ ವಿಕಲಚೇತನರೊಬ್ಬರನ್ನು ಬೆನ್ನ ಮೇಲೆ ಹಾಕಿಕೊಂಡು ಏಣಿ ಮೂಲಕ ಸೈನಿಕರು ರಕ್ಷಿಸಿದ್ದಾರೆ. ತಮ್ಮ ಖಾತೆಯಲ್ಲಿ ವಿಡಿಯೋ ಕುರಿತು ಬರೆದುಕೊಂಡಿರುವ ಸೇನೆ `ನೀವೆಲ್ಲೇ ಇರಿ.. ನಿಮ್ಮ ರಕ್ಷಣೆಗೆ ನಾವು ಇದ್ದೀವಿ’ ಎಂಬ ಹಣೆಬರಹವನ್ನು ನೀಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಓದಿ: ಪ್ರಾಣವನ್ನು ಲೆಕ್ಕಿಸದೇ ಮಗುವನ್ನು ರಕ್ಷಿಸೋದೇ ಗುರಿಯಾಗಿತ್ತು: ಎನ್‍ಡಿಆರ್‌ಎಫ್ ಸಿಬ್ಬಂದಿ
https://www.instagram.com/p/BmxU4UWBfNU/?taken-by=indianarmy.adgpi
ಕೇರಳ ಪ್ರವಾಹದಲ್ಲಿ ಭಾರತೀಯ ಯೋಧರು ಕೈಗೊಂಡಿರುವ ಸೇನೆ ಸಾಹಸಗಳು, ಮಾನವೀಯ ಮುಖಗಳು ಅನಾವರಣ ಆಗುತ್ತಿದೆ. ಕಳೆದ ಕೆಲ ದಿನಗಳ ಕೇರಳ ಪ್ರವಾಹದಲ್ಲಿ ಸಿಲುಕಿದ್ದ ಮಗುವನ್ನು ರಕ್ಷಿಸಿದ್ದ ಯೋಧರೋಬ್ಬರು ಕೇರಳದ ಹೀರೋ ಎನಿಸಿಕೊಂಡಿದ್ದರು. ಸದ್ಯ ಕೇರಳದಲ್ಲಿ ಹಲವು ಕಡೆ ಪ್ರವಾಹದ ಮಟ್ಟ ಕಡಿಮೆಯಾಗಿದ್ದರೂ ಕೂಡ ಪ್ರವಾಹದಿಂದ ಸಂತ್ರಸ್ತರ ಜನರ ನೋವು ಮಾತ್ರ ಕಡಿಮೆಯಾಗಿಲ್ಲ. ಇದನ್ನು ಓದಿ: 1.5 ಲಕ್ಷರೂ. ದೇಣಿಗೆ ನೀಡಿದ್ಳು ಮೀನು ಮಾರಿ ಟ್ರೋಲಾಗಿದ್ದ ಕೇರಳ ಯುವತಿ!
ಇದರ ನಡುವೆಯೇ ಕೇರಳ ಸರ್ಕಾರ ಅಲ್ಲಿನ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ 1 ಲಕ್ಷ ರೂ, ವರೆಗೂ ಬಡ್ಡಿ ರಹಿತ ಸಾಲ ಘೋಷಣೆ ಮಾಡಿದ್ದಾರೆ. ಈ ಯೋಜನೆ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಲಭ್ಯವಾಗಲಿದ್ದು, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅನುಕೂಲವಾಗಲಿದೆ. ಇದನ್ನು ಓದಿ: ಯುಎಇ 700 ಕೋಟಿ ರೂ. ನೆರವಿಗೆ ಕೇಂದ್ರ ನೀತಿ ಅಡ್ಡಿ?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/BmvqdyohbEL/?taken-by=indianarmy.adgpi