ತಿರುವನಂತಪುರಂ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಅಂಬುಲೆನ್ಸ್ (Ambulance) ಚಾಲಕರಾಗಿ ವೃತ್ತಿಪ್ರಾರಂಭಿಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Advertisement
ಕೊಟ್ಟಾಯಂ ನಿವಾಸಿ ಪಿ.ಜಿ ದೀಪಾಮೋಲ್ ಅವರು ಕೇರಳದ ಮೊದಲ ಮಹಿಳಾ ಚಾಲಕರಾಗಿ ಸೇವೆಸಲ್ಲಿಸಲು ಸಿದ್ಧರಾಗಿದ್ದಾರೆ. 42 ವರ್ಷದ ದೀಪಾಮೋಲ್ ಅವರು ಆರೋಗ್ಯ ಇಲಾಖೆಯ ಅಂಬುಲೆನ್ಸ್ ಸೇವೆಯೊಂದಿಗೆ ಮೊದಲ ಮಹಿಳಾ ಚಾಲಕರಾಗಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಸಮಾರಂಭದಲ್ಲಿ ಅವರು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಂದ ಅಂಬುಲೆನ್ಸ್‌ನ ಕೀಗಳನ್ನು ಸ್ವೀಕರಿಸಿದ್ದಾರೆ.
Advertisement
Advertisement
ಇದು ಕೇರಳದ ಮಹಿಳೆಯರಲ್ಲಿ ತಾವು ಯಾವುದೇ ಕೆಲಸ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ದೀಪಾಮೋಳ್ ಅವರು ಅಂಬುಲೆನ್ಸ್ ಚಾಲಕರಾಗಲು ಇಚ್ಛೆ ವ್ಯಕ್ತಪಡಿಸಿದರು. ಈ ಆಲೋಚನೆಯನ್ನು ಸಿಪಿಐ(ಎಂ) ಸರ್ಕಾರವು, ಇದೀಗ ರಾಜ್ಯದ ಮೊದಲ ಮಹಿಳಾ ಅಂಬುಲೆನ್ಸ್ ಚಾಲಕರಾಗಿದ್ಧಾರೆ.
Advertisement
ದೀಪಾಮೋಳ್ ಅವರು 2008ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದು, ಟ್ಯಾಕ್ಸಿ ಓಡಿಸುವುದರ ಜೊತೆಗೆ ಟಿಪ್ಪರ್ ಲಾರಿ ಸೇರಿದಂತೆ ಭಾರೀ ವಾಹನಗಳನ್ನು ಓಡಿಸಲು 2009ರಲ್ಲಿ ಪರವಾನಗಿ ಪಡೆದಿದ್ದಾರೆ. ಚಿಕ್ಕ ಡ್ರೈವಿಂಗ್ ಸ್ಕೂಲ್ ಕೂಡ ನಡೆಸುತ್ತಿದ್ದಾರೆ. 2021 ರಲ್ಲಿ, ಅವರು 16 ದಿನಗಳಲ್ಲಿ ಕೊಟ್ಟಾಯಂನಿಂದ ಲಡಾಖ್‍ಗೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದರು. ಜೊತೆಗೆ ತ್ರಿಶೂರ್‍ನಲ್ಲಿ ನಡೆದ ಆಫ್-ರೋಡ್ ಡ್ರೈವಿಂಗ್ ಸ್ಪರ್ಧೆಯನ್ನು ಗೆದ್ದರು. ಅವರ ಪತಿ ಮೋಹನನ್ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅವರು ಡ್ರೈವಿಂಗ್‍ನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಮೂಲಕ ಕುಟುಂಬವನ್ನು ಬೆಂಬಲಿಸಿದರು. ದೀಪಾಮೋಲ್ ಅವರು ಅಂಬುಲೆನ್ಸ್ ಓಡಿಸಲು ಅಗತ್ಯವಿರುವ ಎಲ್ಲಾ ಡ್ರೈವಿಂಗ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ
ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಮುಂಚೂಣಿಗೆ ಬರಬೇಕು. ಆರ್ಥಿಕ ಸ್ವಾವಲಂಬನೆ ಪಡೆಯಲು ಯಾವುದೇ ಕೆಲಸವನ್ನು ಕೈಗೊಳ್ಳುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು ಎಂದು ದೀಪಾಮೋಳ್ ಹೇಳಿದರು.