ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್

Public TV
1 Min Read
ALI AKBAR

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಮತ್ತು ಅವರ ಪತ್ನಿ ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

BIPIN RAWATH 1

ಈ ಬಗ್ಗೆ ವೀಡಿಯೋ ಮೂಲಕ ಸ್ಪಷ್ಟ ಪಡಿಸಿರುವ ಅಲಿ ಅಕ್ಬರ್, ಸೇನಾ ದಂಡನಾಯಕ ಬಿಪಿನ್ ರಾವತ್ ಹುತಾತ್ಮರಾದಾಗ ಅವರ ಫೋಟೋ ಹಾಕಿಕೊಂಡು ಅಪಹಾಸ್ಯ, ನಗುವಿನ ಇಮೋಜಿ ಹಾಕಿ ಸಂಭ್ರಮಿಸಿದ ಕೆಲ ಮುಸ್ಲಿಂ ಬಾಂಧವರನ್ನು ಕಂಡು ನನಗೆ ನಮ್ಮ ಧರ್ಮದಲ್ಲಿ ಇರಲು ಇಷ್ಟವಿಲ್ಲ. ಹಾಗಾಗಿ ನಾನು ಮತ್ತು ನನ್ನ ಪತ್ನಿ ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸೇರುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಉ.ಪ್ರ. ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮತಾಂತರ

Wasim Rizvi 1

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅಲಿ ಅಕ್ಬರ್ ಎಂದಿದ್ದ ತಮ್ಮ ಹೆಸರನ್ನು ರಾಮಸಿಂಹನ್ ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ. ಬಿಪಿನ್ ರಾವತ್ ಹುತಾತ್ಮರಾದಾಗ ಕೆಲ ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಈ ಬಗ್ಗೆ ಧರ್ಮದ ಗುರುಗಳು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡದೇ ಇದ್ದುದರಿಂದ ಬಹಳಷ್ಟು ನೋವಾಗಿದೆ ಹಾಗಾಗಿ ಮತಾಂತರವಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್

ಅಲಿ ಅಕ್ಬರ್ ಮತ್ತು ಅವರ ಪತ್ನಿ ಮಾತ್ರ ಮತಾಂತರಗೊಂಡಿದ್ದು, ಅವರ ಪುತ್ರಿಗೆ ತಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ- ಪೊಲೀಸರ ತನಿಖೆಯಿಂದ ಬಯಲು

ಕೆಲದಿನಗಳ ಹಿಂದೆ ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ದಾಸ್ನಾ ದೇವಸ್ಥಾನದ ಮಹಂತ್ ನರಸಿಂಹ ಆನಂದ ಸರಾವತಿ ಅವರು ರಿಜ್ವಿ ಅವರಿಗೆ ಔಪಚಾರಿಕವಾಗಿ ಹಿಂದೂ ಧರ್ಮದ ದೀಕ್ಷೆಯನ್ನು ನೀಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *