ತಿರುವನಂತಪುರಂ: ತನ್ನ 15 ವರ್ಷದ ಮಲಮಗಳ (Step Daughter) ಮೇಲೆ ಅತ್ಯಾಚಾರ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಕೇರಳದ (Kerala) ನ್ಯಾಯಾಲಯವೊಂದು 40 ಜೈಲು ಶಿಕ್ಷೆ ವಿಧಿಸಿದೆ.
ಇಡುಕ್ಕಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶ ಟಿ.ಜಿ ವರ್ಗೀಸ್ 2017ರಲ್ಲಿ ನಡೆದ ಘಟನೆಗೆ ಸಂಬಂಧಿಸಿ ತೀರ್ಪು ನೀಡಿದ್ದಾರೆ. ಪೋಕ್ಸೊ ಕಾಯ್ದೆಯಡಿಯಲ್ಲಿ ಅಪರಾಧಿಗೆ 40 ವರ್ಷಗಳ ಜೈಲು (Jail) ಶಿಕ್ಷೆ ವಿಧಿಸಿದ್ದಾರೆ.
Advertisement
Advertisement
41 ವರ್ಷದ ವ್ಯಕ್ತಿಯು ತನ್ನ ಮಲಮಗಳ ಮೇಲೆ ಅತ್ಯಾಚಾರವೆಸಗಿದ್ದ. ಇದರಿಂದ ಆಕೆ ಗರ್ಭವತಿಯಾಗಿದ್ದಳು. ಆದರೆ ಆತ ಆಕೆ ಬಳಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಹಾಗೂ ಆಕೆಯ ತಾಯಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
Advertisement
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ಬಂದಿದ್ದು, ವೈಜ್ಞಾನಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಅಪರಾಧಿಗೆ 1 ಲಕ್ಷ ರೂ. ದಂಡ ವಿಧಿಸಿದೆ ಮತ್ತು ಸಂತ್ರಸ್ತೆಯ ಪುನರ್ವಸತಿಗಾಗಿ 50,000 ರೂ. ಪಾವತಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದೆ.
Advertisement
ಪೋಕ್ಸೊ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೊದಲು ಅಪರಾಧಿಗೆ ಕೇವಲ 10 ವರ್ಷ ಶಿಕ್ಷೆ ನೀಡಲಾಗಿತ್ತು ಎಂದು ಪ್ರಾಸಿಕ್ಯೂಟರ್ ಹೇಳಿದರು. 2019ರಲ್ಲಿ ಕಾಯಿದೆಯನ್ನು ತಿದ್ದುಪಡಿ ಮಾಡಿದ ನಂತರ ಈ ಅಪರಾಧಗಳಿಗೆ ಕನಿಷ್ಠ 20 ವರ್ಷಗಳ ಶಿಕ್ಷೆ ವಿಧಿಸಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k