ತಿರುವನಂತಪುರ: ಕೇರಳದ ಸಿಲ್ವರ್‌ಲೈನ್ ರೈಲು ಯೋಜನೆ ವಿರುದ್ಧ ವ್ಯಾಪಕ ಪ್ರತಿಭಟನೆ ಮುಂದುವರಿದಿರುದಿದೆ. ಈ ಮಧ್ಯೆ ಮುಖ್ಯಮಂತ್ರಿ ಪಿಣಾರಾಯಿ ವಿಜಯನ್ ಜನರ ಆತಂಕವಮನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದ್ದು, ಸಾಮಾಜಿಕ ಪರಿಣಾಮಗಳ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಎಡರಂಗ (ಎಲ್‍ಡಿಎಫ್) ಸರ್ಕಾರದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಲ್ವರ್‌ಲೈನ್ ರೈಲು ಯೋಜನೆಗೆ ಭೂಮಿ ನೀಡುವವರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅವರಿಗೆ ಸರ್ಕಾರದಿಂದ ಭಾರೀ ಪ್ರಮಾಣದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ
ಸಿಲ್ವರ್‌ಲೈನ್ ಯೋಜನೆ ವಿರುದ್ಧ ಬಿಜೆಪಿ ಕೇಂದ್ರ ಸಚಿವ ವಿ. ಮುರಳೀಧರನ್ ಮನೆ-ಮನೆ ಪ್ರಚಾರವನ್ನು ನಡೆಸಿದ್ದರ ಬಗ್ಗೆ ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಿಲ್ವರ್ ರೈಲು ಯೋಜನೆ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಆದರೆ ಅವರ ಕೈಕೆಳಗಿರುವ ಸಚಿವರು ಈ ರೀತಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು. ಇದೇ ವೇಳೆ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆ ಯೋಜನೆಗಳನ್ನು ಜಾರಿಗೊಳಿಸಿ 20 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಹೇಳಿದರು. ಇದನ್ನೂ ಓದಿ: ಬುದ್ದಿ ಮಾತು ಹೇಳಿದ ತಮ್ಮನನ್ನೆ ಕೊಂದ ಅಣ್ಣ