ತಿರುವನಂತಪುರಂ: ಭಾರತವು ವಿವಿಧತೆಯಲ್ಲಿ ಏಕತೆಗೆ ಹೆಸರುವಾಸಿಯಾದ ದೇಶವಾಗಿದ್ದು, ಈ ವೈವಿಧ್ಯತೆಯನ್ನು ಗುರುತಿಸುವುದು ಸಂಘ ಪರಿವಾರದ ಅಜೆಂಡವಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದರು.
ಕೇಂದ್ರ- ರಾಜ್ಯ ಸಂಬಂಧಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಿಂದಿಯನ್ನು ಹೇರುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಭಾರತವು ವೈವಿಧ್ಯತೆಯಲ್ಲಿ ಏಕತೆಗೆ ಹೆಸರಾದ ದೇಶ. ಕಲ್ಪನೆಯೇ ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದು. ನಮ್ಮ ಸಂವಿಧಾನವು ಭಾರತದಲ್ಲಿ ಹಲವು ಭಾಷೆಗಳಿಗೆ ಪ್ರಾಮುಖ್ಯತೆ ನೀಡಿದೆ ಎಂದು ಹೇಳಿದರು.
ಸುದೀರ್ಘ ಹೋರಾಟದ ನಂತರ ಭಾಷೆಯ ಆಧಾರದ ಮೇಲೆ ಹೆಚ್ಚಿನ ರಾಜ್ಯಗಳು ರಚನೆಯಾದವು. ಸಂಘ ಪರಿವಾರದ ಅಜೆಂಡಾವು ನಮ್ಮ ದೇಶದ ವೈವಿಧ್ಯತೆ ಮತ್ತು ಫೆಡರಲಿಸಂ ಅನ್ನು ಗುರುತಿಸುವುದಲ್ಲ, ಬದಲಿಗೆ ಪ್ರಾದೇಶಿಕ ಭಾಷೆಗಳನ್ನು ದುರ್ಬಲಗೊಳಿಸುವುದು ಅವರ ಕಾರ್ಯಸೂಚಿಯ ಭಾಗವಾಗಿದೆ ಎಂದು ಟೀಕಿಸಿದರು.
ಪ್ರತಿಯೊಂದು ಸಮಾಜದ ಸಂಸ್ಕೃತಿ ಮತ್ತು ಜೀವನಕ್ಕೆ ಭಾಷೆಗಳು ಆಧಾರವಾಗಿದೆ. ಒಂದು ಭಾಷೆಯನ್ನು ಕೊಂದರೆ ಈ ವೈವಿಧ್ಯತೆಯೇ ನಾಶವಾಗುತ್ತದೆ. ಇಂತಹ ನಡೆಗಳು ದೇಶದಲ್ಲಿ ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿಸುತ್ತವೆ. ಹಿಂದಿಯನ್ನು ರಾಷ್ಟ್ರೀಯ ಚಳವಳಿಯ ಭಾಗವಾಗಿ ಬಳಸಲಾಗುತ್ತಿತ್ತು. ಆ ಅರ್ಥದಲ್ಲಿ ಅದನ್ನು ರಾಷ್ಟ್ರೀಯ ಮಟ್ಟದ ಭಾಷೆ ಎಂದು ಪರಿಗಣಿಸಲಾಗಿದೆ ಮತ್ತು ಅದಕ್ಕಾಗಿಯೇ ನಾವು ಕೇರಳದ ಶಾಲೆಗಳಲ್ಲಿ ತ್ರಿಭಾಷಾ ಕೋರ್ಸ್‍ಗಳನ್ನು ಜಾರಿಗೆ ತಂದಿದ್ದೇವೆ. ಹಿಂದಿಯನ್ನು ಹೇರುವುದು ಮತ್ತು ಪ್ರಾದೇಶಿಕ ಭಾಷೆಗಳನ್ನು ನಾಶಪಡಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ನಡೀತಿರೋ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವುದಿಲ್ಲ: ಮಾಧುಸ್ವಾಮಿ ಅಸಮಾಧಾನ
ಸಂಸತ್ತಿನ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಿತ್ ಷಾ ಅವರು, ಸರ್ಕಾರವನ್ನು ನಡೆಸುವ ಮಾಧ್ಯಮವು ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಇದು ಖಂಡಿತವಾಗಿಯೂ ಹಿಂದಿ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಹಿಂದಿಯನ್ನು ಇಂಗ್ಲಿಷ್‍ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಮತ್ತು ಸ್ಥಳೀಯ ಭಾಷೆಗಳಿಗೆ ಅಲ್ಲ ಎಂದಿದ್ದರು. ಇದನ್ನೂ ಓದಿ: 5 ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ- ಭಾರತಕ್ಕೆ 3ನೇ ಅಲೆಯ ಮುನ್ಸೂಚನೆ