ಚಿಕ್ಕೋಡಿ(ಬೆಳಗಾವಿ): ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವುದಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ಸಚಿವ ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಬೆಳಗಾವಿಯ ನಿಪ್ಪಾಣಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾರಿಗಾದ್ರೂ ತೊಂದರೆ ಕೊಡುವುದು, ಶಾಂತಿ ಕದಡುವುದು ಯಾರು ಮಾಡಿದರೂ ಗೌರವ ಬರುವುದಿಲ್ಲ. ಅದರಲ್ಲೂ ಆಡಳಿತ ಪಕ್ಷಕ್ಕಂತೂ ಗೌರವ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲ್ಲ, ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತೆ: ಶೆಹಬಾಜ್ ಷರೀಫ್
Advertisement
Advertisement
ಆಡಳಿತ ಮಾಡಬೇಕಾದರೆ ಎಲ್ಲರು ಈ ದೇಶದ ಪ್ರಜೆಗಳೇ ಎಂದು ಭಾವಿಸಬೇಕು. ಆಕಸ್ಮಿಕವಾಗಿ ನಡೆಯುವದು ಬೇರೆ ಹುಡುಕಿಕೊಂಡು ಹೋಗುವುದನ್ನ ಯಾರೂ ಒಪ್ಪಿಕೊಳ್ಳಲು ಆಗುವುದಿಲ್ಲ. ಚಂದ್ರು ಹತ್ಯೆ ಪ್ರಕರಣದ ಮಾಹಿತಿಯನ್ನ ಗೃಹ ಮಂತ್ರಿಗಳಿಗೆ ಸರಿಯಾಗಿ ನೀಡಿಲ್ಲ. ಗೃಹ ಸಚಿವ ಅರಗ ಜ್ಞಾನೇಂದ್ರ ತಕ್ಷಣ ರಿಯಾಕ್ಟ್ ಮಾಡಿದ್ದು ಗೊಂದಲಕ್ಕೆ ಕಾರಣವಾಗಿದೆ. ಸಮಾಧಾನವಾಗಿ ವರ್ತಿಸಬೇಕು ಎಲ್ಲರೂ ಸಮಾನತೆಯಿಂದ ಬದುಕಬೇಕು ಎಂದರು.
Advertisement
ಶಾಂತಿ ಇರುವ ಕಡೆಗೆ ಅಭಿವೃದ್ಧಿಗೆ ಬೆಲೆ ಜಾಸ್ತಿ. ಶಾಂತಿ ಕದಡಿದರೇ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದ ಅವರು, ಸದ್ಯಕ್ಕೆ ಸಂಪುಟ ಪುನರಾರಚನೆ ಇಲ್ಲ ಎಲ್ಲವೂ ಊಹಾಪೋಹ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ- ಜಮೀರ್ ಹೇಳಿಕೆ ಬೆನ್ನಲ್ಲೇ ಸೈಮನ್ ರಾಜ್ ಕಣ್ಮರೆ