ಶಾರ್ಟ್ ಸರ್ಕ್ಯೂಟ್‌ನಿಂದ ಕುವೈತ್‌ನ ಫ್ಲ್ಯಾಟ್‌ನಲ್ಲಿ ಬೆಂಕಿ – ಕೇರಳ ಮೂಲದ ದಂಪತಿ, ಇಬ್ಬರು ಮಕ್ಕಳು ದುರ್ಮರಣ

Public TV
1 Min Read
Kerala Family Death In kuwait

ಕುವೈತ್: ಶಾರ್ಟ್ ಸರ್ಕ್ಯೂಟ್‌ನಿಂದಾಗಿ (Short Circuit) ಏರ್ ಕಂಡೀಷನರ್‌ನಲ್ಲಿ (Air Conditioner) ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ (Kerala) ಮೂಲದ ದಂಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುವೈತ್‌ನ (Kuwait) ಫ್ಲ್ಯಾಟ್‌ವೊಂದರಲ್ಲಿ ನಡೆದಿದೆ.

ಕೇರಳದ ಅಲಪ್ಪುಳದ ನೀರತ್ತುಪುರಂನವರಾದ ಮ್ಯಾಥ್ಯೂಸ್ ಮುಲಾಕಲ್, ಪತ್ನಿ ಲಿನಿ ಅಬ್ರಹಾಂ ಮತ್ತು ಇಬ್ಬರು ಮಕ್ಕಳು ಘಟನೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆ ರಜೆಗೆಂದು ಕೇರಳಕ್ಕೆ ತೆರಳಿದ್ದ ಕುಟುಂಬ ಶುಕ್ರವಾರ ಕುವೈತ್‌ಗೆ ವಾಪಸ್ ಆಗಿತ್ತು. ಅದೇ ದಿನ ರಾತ್ರಿ 8 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ತಮಿಳುನಾಡು ಸರ್ಕಾರಿ ಬಸ್‌ಗೆ ಯುವಕನಿಂದ ಕಲ್ಲೇಟು

ವರದಿಗಳ ಪ್ರಕಾರ, ಮ್ಯಾಥ್ಯೂಸ್ ಮುಲಾಕಲ್ ಅವರು ಸುದ್ದಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಲಿನಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಕರ್ನಾಟಕದ ನೆರೆರಾಜ್ಯ ಕೇರಳದಲ್ಲಿ ನಿಫಾ ವೈರಸ್‌ ಪತ್ತೆ – 14ರ ಬಾಲಕನಿಗೆ ಸೋಂಕು

ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ. ರಾಯಭಾರ ಕಚೇರಿ ಕೇರಳದಲ್ಲಿರುವ ಮೃತರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ಕೇರಳಕ್ಕೆ ತಲುಪಿಸುವ ತಯಾರಿ ನಡೆಸುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 115 ಮಂದಿ ಬಲಿ – 1,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತವರಿಗೆ ವಾಪಸ್‌

Share This Article