LatestLeading NewsMain PostNational

ಆಟೋ ಚಾಲಕನಿಗೆ ಜಾಕ್‌ಪಟ್‌ – ಓಣಂ ಬಂಪರ್‌ ಲಾಟರಿಯಲ್ಲಿ 25 ಕೋಟಿ ಗೆದ್ದ

ತಿರುವನಂತಪುರಂ: ಕೇರಳ (Kerala) ಸರ್ಕಾರದ ಓಣಂ ಬಂಪರ್‌ ಲಾಟರಿ (Onam bumper lottery) ಖರೀದಿಸಿದ್ದ ಆಟೋ ಚಾಲಕನಿಗೆ ಬರೋಬ್ಬರಿ 25 ಕೋಟಿ ರೂ. ಜಾಕ್‌ಪಾಟ್‌ ಹೊಡೆದಿದೆ.

ಇಲ್ಲಿನ ಶ್ರೀವರಾಹಂನ ಆಟೋ ಚಾಲಕ ಅನೂಪ್ ಎಂಬಾತ ಈ ವರ್ಷದ ಓಣಂ ಬಂಪರ್ ಲಾಟರಿ ಗೆದ್ದಿದ್ದಾರೆ. ಅನೂಪ್‌ ಶನಿವಾರ ಭಗವತಿ ಏಜೆನ್ಸಿಯಿಂದ (ಟಿಕೆಟ್ ಸಂಖ್ಯೆ TJ-750605) ಅದೃಷ್ಟದ ಟಿಕೆಟ್‌ ಖರೀದಿಸಿದ್ದರು. ತೆರಿಗೆ ಹಾಗೂ ಕಮಿಷನ್‌ ಕಳೆದರೆ, ಅನೂಪ್‌ ಕೈಗೆ 15.75 ಕೋಟಿ ರೂ. ಸಿಗುತ್ತದೆ. ಇದನ್ನೂ ಓದಿ: ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿ: ತಲೆ ಕೂದಲು ಕತ್ತರಿಸಿ, ಹಿಜಬ್ ಸುಟ್ಟು ಇರಾನಿ ಮಹಿಳೆಯರ ಆಕ್ರೋಶ

ಅನೂಪ್‌ ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮುನ್ನ ಹೋಟೆಲೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಮಲೇಷ್ಯಾಗೆ ಹೋಗಿ ಬಾಣಸಿಗನಾಗಿ ಕೆಲಸ ಮಾಡಲು ಯೋಜಿಸಿದ್ದರು. ಅದಕ್ಕಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಮುಂದಾಗಿದ್ದರು. ಸಾಲ ಕೂಡ ಮಂಜೂರಾಗಿತ್ತು. ಆದರೆ ಈಗ ಬಂಪರ್‌ ಲಾಟರಿ ಗೆದ್ದಿರುವುದರಿಂದ ವಿದೇಶಕ್ಕೆ ಹಾರುವ ಯೋಜನೆಯನ್ನು ಕೈಬಿಟ್ಟಿದ್ದಾರೆ.

ಕಳೆದ ವರ್ಷ ಓಣಂ (Onam) ಬಂಪರ್‌ ಲಾಟರಿ ಬಹುಮಾನದ ಮೊತ್ತ 12 ಕೋಟಿ ಇತ್ತು. ಅದನ್ನು ಈ ವರ್ಷ 25 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರತಿ ಟಿಕೆಟ್‌ ದರ 500 ರೂ. ನಿಗದಿಪಡಿಸಲಾಗಿತ್ತು. ಈ ಬಾರಿ ದಾಖಲೆಯ 67 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಇದನ್ನೂ ಓದಿ: ಸೀರೆಯುಟ್ಟು ಸಂಸದೆ ಮಹುವಾ ಮೊಯಿತ್ರಾ ಫುಟ್‍ಬಾಲ್ ಆಟ – ನೆಟ್ಟಿಗರು ಫುಲ್ ಫಿದಾ

ಓಣಂ ಬಂಪರ್‌ ಲಾಟರಿ ಬಹುಮಾನ ತಂದ ಟಿಕೆಟ್‌ ಮಾರಾಟ ಮಾಡಿದ್ದ ತಿರುವನಂತಪುರಂನ ಭಗವತಿ ಏಜೆನ್ಸಿಗೆ ಕಮಿಷನ್‌ ರೂಪದಲ್ಲಿ 2.5 ಕೋಟಿ ರೂ. ಸಿಗಲಿದೆ.

Live Tv

Leave a Reply

Your email address will not be published.

Back to top button