‘ಕಡಲತೀರದ ಭಾರ್ಗವ’ (Kadala Theerada Bhargava) ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಪನ್ನಾಗ ಹೊಸ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಟೈಟಲ್, ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಪನ್ನಾಗ ಹೊಸ ಹೆಜ್ಜೆಗೆ ‘ಕೆಂದಾವರೆ’ (Kendavare) ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಈ ಚಿತ್ರದ ಮೂಲಕ ಆದಿತ್ಯ ವಿನೋದ್ ನಾಯಕನಾಗಿ ಸ್ಯಾಂಡಲ್‌ವುಡ್ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ವಿನೋದ್ ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿದ್ದರು.
Advertisement
ನೈಜ ಘಟನೆಯ ಆಧಾರಿತ ‘ಕೆಂದಾವರೆ’ ಸಿನಿಮಾಗೆ ಆದಿತ್ಯ ವಿನೋದ್, ಹಿತಾಂಶು ಸಂಗೀತ ಒದಗಿಸುತ್ತಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣ ನೀಡಲಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಹೊಸ ಚಿತ್ರ ಅನೌನ್ಸ್- ಶ್ರೀನಗರ ಕಿಟ್ಟಿಗೆ ಜೊತೆಯಾದ ನಟಿ
Advertisement
Advertisement
ಅಪ್ರಮೇಯ ಫಿಲ್ಮಂಸ್ ಬ್ಯಾನರ್ ನಡಿ ಚಿತ್ರ ತಯಾರಾಗುತ್ತಿದ್ದು, ಅನಿಲ್ ಎಂ ಎಚ್, ಪ್ರಶಾಂತ್ ಸಹ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಹುಬ್ಬಳ್ಳಿ, ಕಾರ್ಕಳ, ಸಾಗರ ಭಾಗದಲ್ಲಿ ಕೆಂದಾವರೆ ಸಿನಿಮಾದ ಚಿತ್ರೀಕರಣ ನಡೆಸಲು ತಂಡ ಸಜ್ಜಾಗಿದೆ. ನವೆಂಬರ್ ತಿಂಗಳಿನಿಂದ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ.
Advertisement