– ಏಷ್ಯಾ ವಿಮಾನ ನಿಲ್ದಾಣಗಳಲ್ಲೇ ಅತ್ಯುತ್ತಮ ಸಿಬ್ಬಂದಿ ಸೇವೆ
ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ ಗರಿ ಲಭಿಸಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ ಕೊಡುವ ಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಆ್ಯಂಡ್ ಸೆಂಟ್ರಲ್ ಏಷ್ಯಾ (ಭಾರತ ಮತ್ತು ಮಧ್ಯ ಏಷ್ಯಾದಲಿಯ್ಲೇ ಅತುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ) ಪ್ರಶಸ್ತಿಗೆ ಭಾಜನವಾಗಿದೆ.
Advertisement
ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ ವತಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ ಗ್ರಾಹಕರು ಇತರೆ ವಿಮಾನ ನಿಲ್ದಾಣಗಳಲ್ಲಿನ ಸಿಬ್ಬಂದಿ ನೀಡುವ ಸೇವೆಗಿಂತ ಕೆಐಎ ವಿಮಾನ ನಿಲ್ದಾಣದ ಸೇವೆಗೆ ಅತ್ಯತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸೇವಾ ಗುಣಮಟ್ಟದ ಪ್ರಶಸ್ತಿ
Advertisement
Advertisement
ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಸಿಇಓ ಹರಿ ಮರಾರ್ ಮಾತನಾಡಿ, ಈ ಪ್ರಶಸ್ತಿ ಲಭಿಸಿದ್ದು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೂ ಸಂತಸ ತಂದಿದೆ. ಇಲ್ಲಿನ ಸಿಬ್ಬಂದಿ ಕಾರ್ಯಕ್ಷಮತೆಯಿಂದ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಮತಹಾಕಿದ ಎಲ್ಲಾ ಪ್ರಯಾಣಿಕರಿಗೂ ಅಭಿನಂದನೆ ತಿಳಿಸಿದ್ದಾರೆ.
Advertisement
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ)ನಿಂದ ವಿಶ್ವದ ವಾಯ್ಸ್ ಆಫ್ ದಿ ಕಸ್ಟಮರ್ ಮಾನ್ಯತೆ ಮತ್ತು ಎಸಿಐ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ ಅವಾರ್ಡ್ ಲಭಿಸಿತ್ತು. ಅಲ್ಲದೆ ರೋಲ್ ಆಫ್ ಎಕ್ಸಲೆನ್ಸ್ ಫಾರ್ ದಿ ಇಯರ್ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.