ಮುಂದಿನ ಚುನಾವಣೆಯಲ್ಲಿ ಗೆದ್ದರೆ ಮನೆ ಬಾಗಿಲಿಗೇ RTO ಸೇವೆ – ಕೇಜ್ರಿವಾಲ್

Advertisements

ಗಾಂಧಿನಗರ: ಮುಂದಿನ ಚುನಾವಣೆಯಲ್ಲಿ (Eelection) ಗುಜರಾತ್‌ನಲ್ಲಿ ಎಎಪಿ (AAP) ಅಧಿಕಾರಕ್ಕೆ ಬಂದರೆ ಪ್ರಾದೇಶಿಕ ಸಾರಿಗೆ ಕಚೇರಿಯ (RTO) ಸೇವೆಗಳನ್ನು ಆಟೋ ರಿಕ್ಷಾ ಚಾಲಕರ (Auto Drivers) ಮನೆಬಾಗಿಲಿಗೇ ತಲುಪಿಸುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಭರವಸೆ ನೀಡಿದ್ದಾರೆ.

Advertisements

ವರ್ಷಾಂತ್ಯದ ವೇಳೆಗೆ ನಡೆಯಲಿರುವ ಗುಜರಾತ್ ಚುನಾವಣೆಯಲ್ಲಿ (Gujarat Election) ಆಮ್‌ಆದ್ಮಿ ಪಕ್ಷ ಭರ್ಜರಿ ಜಯ ಸಾಧಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ಅದಕ್ಕಾಗಿ ಭರ್ಜರಿ ಪ್ರಚಾರ ಕಾಯಕ್ರಮಗಳನ್ನೂ ನಡೆಸುತ್ತಿದೆ.

Advertisements

ಈ ಸಂಬಂಧ ಅಹಮದಾಬಾದ್‌ನಲ್ಲಿಂದು ನಡೆದ ಚುನಾವಣಾ ಪ್ರಚಾರ (Election Meeting) ಸಭೆಯನ್ನುದ್ದೇಶಿ ಮಾತನಾಡಿದ ಕೇಜ್ರಿವಾಲ್, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಆಟೋ ಚಾಲಕರ ಮೇಲೆ ಆಗುತ್ತಿರುವ ಕಿರುಕುಳ ತಪ್ಪಿಸಲು ಪ್ರಾದೇಶಿಕ ಸಾರಿಗೆ ಕಚೇರಿಯ (RTO) ಸೇವೆಗಳನ್ನು ಆಟೋ ರಿಕ್ಷಾ ಚಾಲಕರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ ಅಬ್ಬರ ಶುರು – ಮೊದಲ ದಾಳಿಯಲ್ಲೇ BBMP ಜಂಟಿ ಆಯುಕ್ತ ಅರೆಸ್ಟ್

ಪರವಾನಗಿ ನವೀಕರಣ, ಮಾಲೀಕತ್ವ ಬದಲಾವಣೆ, ಅನುಮತಿಯಂತ ಕೆಲಸಗಳಿಗಾಗಿ ದೆಹಲಿಯಲ್ಲಿ (New Delhi) ಆಟೋ ಚಾಲಕರು ಆರ್‌ಟಿಒ ಕಚೇರಿಗೆ ಹೋಗಬೇಕಿಲ್ಲ. ನಾವು ಒಂದು ದೂರವಾಣಿ ಸಂಖ್ಯೆ ನೀಡಿದ್ದೇವೆ. ಆ ಸಂಖ್ಯೆಗೆ ಕರೆ ಮಾಡಿದರೆ ಅಧಿಕಾರಿಗಳೇ ಚಾಲಕರ ಮನೆ ಬಾಗಿಲಿಗೆ ಬಂದು ಕೆಲಸ ಮಾಡಿಕೊಡುತ್ತಾರೆ. ಇದರಿಂದ ಪೊಲೀಸರು, ಅಧಿಕಾರಿಗಳಿಗೆ ಲಂಚ ನೀಡುವುದು ತಪ್ಪುತ್ತದೆ. ಇವೆಲ್ಲವೂ ಗುಜರಾತ್‌ನಲ್ಲೂ ಆಗಬೇಕು ಎಂದರೆ ಎಎಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಅವರು ಹೇಳಿದ್ದಾರೆ.

Advertisements

ದೆಹಲಿಯಲ್ಲಿ ಎಎಪಿ ಗೆಲುವಿನ ಹಿಂದೆ ಆಟೋ ಚಾಲಕರ ಪಾತ್ರ ಮಹತ್ವದ್ದಾಗಿದೆ. ಗುಜರಾತ್‌ನಲ್ಲೂ ಎಎಪಿ ಪರ ಪ್ರಚಾರ ನಡೆಸಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯಬೇಕು ಎಂದು ಅವರು ಆಟೋ ಚಾಲಕರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಟ ನರೇಶ್ ಮನೆಯಲ್ಲೇ ರಮ್ಯಾ ವಾಸ್ತವ್ಯ: ಪವಿತ್ರಾ ಲೋಕೇಶ್ ನಿಂದ ಪತಿಯ ದೂರ ಮಾಡಲು ತಂತ್ರ

ದೆಹಲಿಯ ಸುಮಾರು 1.5 ಲಕ್ಷ ಆಟೊ ಚಾಲಕರಿಗೆ ಕೋವಿಡ್ ಲಾಕ್‌ಡೌನ್ ವೇಳೆ ದೆಹಲಿ ಸರ್ಕಾರ ಎರಡು ಬಾರಿ 5 ಸಾವಿರ ರೂ. ಸಹಾಯಧನ ನೀಡಿತ್ತು. ಗುಜರಾತ್‌ನಲ್ಲೂ ಎಎಪಿ ಅಧಿಕಾರಕ್ಕೆ ಬಂದರೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಮತ್ತು 300 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂಬ ಆಶ್ವಾಸನೆ ನೀಡಿದ್ದಾರೆ.

Live Tv

Advertisements
Exit mobile version