Bengaluru CityCrimeDistrictsKarnatakaLatestLeading NewsMain Post

ಲೋಕಾಯುಕ್ತ ಅಬ್ಬರ ಶುರು – ಮೊದಲ ದಾಳಿಯಲ್ಲೇ BBMP ಜಂಟಿ ಆಯುಕ್ತ ಅರೆಸ್ಟ್

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಲೋಕಾಯುಕ್ತ (Lokayukta Karnataka) ಅಬ್ಬರ ಶುರುವಾಗಿದೆ. ಮರುಸ್ಥಾಪನೆಗೊಂಡ ಬಳಿಕ ಲೋಕಾಯುಕ್ತ ಮೊದಲ ದಾಳಿ ನಡೆಸಿದ್ದು, ಪಶ್ಚಿಮ ವಿಭಾಗದ ಬಿಬಿಎಂಪಿ (BBMP) ಜಂಟಿ ಆಯುಕ್ತ ಶ್ರೀನಿವಾಸ್ (Shrinivas) ಜಾಗೂ ಪಿಎ ಉಮೇಶ್‌ನನ್ನು ಬಂಧಿಸಿದೆ.

ಡಿವೈಎಸ್‌ಪಿ (DYSP) ಮಂಜಯ್ಯ, ಶಂಕರ್ ನಾರಾಯಣ್, ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ನೇತೃತ್ವದ ಲೋಕಾಯುಕ್ತ ಟೀಂ (Lokayukta Team) ಮಲ್ಲೇಶ್ವರಂನಲ್ಲಿರುವ ಪಶ್ಚಿಮ ವಿಭಾಗ ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿದ್ದು, ಬಿಬಿಎಂಪಿ ಜಂಟಿ ಆಯುಕ್ತ ಎಸ್.ಎಂ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಜುನಾಥ್ ಎಂಬವರ ದೂರಿನ ಮೇರೆಗೆ ಖಾತೆ ಬದಲಾವಣೆ ವಿಚಾರದಲ್ಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು (Police) ದಾಳಿ ನಡೆಸಿದೆ. 4 ಲಕ್ಷ ಹಣದ ಸಮೇತ ನಿಂತಿದ್ದ ಶ್ರೀನಿವಾಸ್ ಪಿಎ ಉಮೇಶ್ ಹಾಗೂ ಶ್ರೀನಿವಾಸ್‌ರನ್ನ ಬಂಧಿಸಿ, ಕಚೇರಿಯಲ್ಲೇ ವಿಚಾರಣೆ ನಡೆಸಿದೆ. ಇದೀಗ ನ್ಯಾಯಾಧೀಶರ (Judge) ಮುಂದೆ ಹಾಜರುಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯದಲ್ಲಿ ಎಸಿಬಿ (ACB) ರದ್ದುಗೊಂಡು ಇಂದು ಎಸಿಬಿಯಿಂದ ಲೋಕಾಯುಕ್ತಕ್ಕೆ ಸಿಬ್ಬಂದಿ ವರ್ಗಾವಣೆಯನ್ನು ಮಾಡಲಾಗಿದೆ. ಬೆಂಗಳೂರು ಹಾಗೂ ಎಲ್ಲಾ ಜಿಲ್ಲೆ ಸೇರಿದಂತೆ ಒಟ್ಟು 141 ಸಿಬ್ಬಂದಿಯನ್ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಕಾನ್ಸ್ ಟೇಬಲ್ ಮತ್ತು ಹೆಡ್ ಕಾನ್ಸ್ ಟೇಬಲ್ ಮಟ್ಟದ ಸಿಬ್ಬಂದಿ ಮಾತ್ರ ವರ್ಗಾವಣೆ ಮಾಡಲಾಗಿದೆ. ಪ್ರಕರಣಗಳ ಹಸ್ತಾಂತರವಾದ ಬಳಿಕ ಪಿಎಸ್‌ಐ, ಪಿಐ, ಡಿವೈಎಸ್ ಪಿ, ಎಸ್‌ಪಿ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ.

Live Tv

Leave a Reply

Your email address will not be published.

Back to top button