ನವದೆಹಲಿ: ಹೊಸ ಅಬಕಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟು ತಿಹಾರ್ ಜೈಲಿನಲ್ಲಿರುವ (Tihar Jail) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆರೋಗ್ಯ (Health) ಉತ್ತಮವಾಗಿದ್ದು, ಈಗಾಗಲೇ ನೀಡಿರುವ ಔಷಧಿಗಳನ್ನೇ ಮುಂದುವರಿಸುವಂತೆ ಏಮ್ಸ್‌ನ (AIIMS) ತಜ್ಞ ವೈದ್ಯರ ತಂಡ ತಿಳಿಸಿದೆ.
ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಚಿಸಲಾದ ಐದು ಸದಸ್ಯರ ವೈದ್ಯಕೀಯ ಮಂಡಳಿಯು ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ತಪಾಸಣೆ ನಡೆಸಿದೆ. ತಿಹಾರ್ ಜೈಲಿನ ಇಬ್ಬರು ವೈದ್ಯರು ಕೂಡ ಭಾಗವಹಿಸಿದ್ದು, ಸುಮಾರು ಅರ್ಧ ಗಂಟೆ ಕಾಲ ನಡೆಯಿತು. ತಪಾಸಣೆ ಬಳಿಕ ಕೇಜ್ರಿವಾಲ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಅವರು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ಮುಂದುವರಿಸಲಿ. ಜೈಲಿನಲ್ಲಿ ಎರಡು ಯೂನಿಟ್ ಇನ್ಸುಲಿನ್ ಡೋಸ್ (Insulin Dose) ಅನ್ನು ಮುಂದುವರಿಸುವಂತೆ ಏಮ್ಸ್ ವೈದ್ಯರು ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಹೆಲಿಕಾಪ್ಟರ್ ಒಳಗೆ ಆಯತಪ್ಪಿ ಬಿದ್ದ ದೀದಿ- ಸಣ್ಣಪುಟ್ಟ ಗಾಯ
Advertisement
Advertisement
ಈ ವಾರದ ಆರಂಭದಲ್ಲಿ ಅವರ ಸಕ್ಕರೆ ಮಟ್ಟವು (Sugar Level) 320ಕ್ಕೆ ಏರಿದ ನಂತರ ಎಎಪಿ ಮುಖ್ಯಸ್ಥರಿಗೆ ತಿಹಾರ್ ಜೈಲಿನಲ್ಲಿ ಮೊದಲ ಇನ್ಸುಲಿನ್ ಡೋಸೇಜ್ ನೀಡಲಾಯಿತು. ಇದಕ್ಕೂ ಮುನ್ನ ಸಕ್ಕರೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ತಜ್ಞ ವೈದ್ಯರೊಂದಿಗೆ ನಿತ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ ಪಡೆಯಲು ಕೋರಿ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾ ಮಾಡಿದ್ದ ಕೋರ್ಟ್ ಏಮ್ಸ್ ವೈದ್ಯರ ಸಹಕಾರ ಕೋರಿತ್ತು. ನ್ಯಾಯಾಲಯವು ಮನೆಯಲ್ಲಿ ಬೇಯಿಸಿದ ಆಹಾರವನ್ನು ಸಹ ಅನುಮತಿಸದೆ ಕೇಜ್ರಿವಾಲ್ ಅವರು ವೈದ್ಯರು ನೀಡಿದ ಆಹಾರದ ಚಾರ್ಟ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ. ಮಧುಮೇಹಕ್ಕೆ ಇನ್ಸುಲಿನ್ ಮತ್ತು ಇತರ ಔಷಧಿಗಳನ್ನು ನಿರಾಕರಿಸುವ ಮೂಲಕ ದೆಹಲಿ ಸಿಎಂ ಅವರನ್ನು ಜೈಲಿನಲ್ಲಿ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಎಎಪಿ ಆರೋಪಿಸಿತ್ತು. ಇದನ್ನೂ ಓದಿ: ಆಪ್ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು
Advertisement