ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ `ಸರ್ಕಾರಿ ವಾರಿ ಪಾಟ’ ಚಿತ್ರದ ಸಕ್ಸಸ್ ನಂತರ ಪ್ರತಿಷ್ಠಿತ ಬ್ಯಾನರ್ ಹೊಂಬಾಳೆ ಬ್ಯಾನರ್‌ಗೆ ಕೀರ್ತಿ ಸುರೇಶ್ ಸಾಥ್ ನೀಡಿದ್ದಾರೆ. ಜತೆಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿಯ ಡೈರೆಕ್ಷನ್‌ನಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ತಿದ್ದಾರೆ.

ರಾಷ್ಟ್ರ ವಿಜೇತೆ ಸುಧಾ ಕೊಂಗರ ನಿರ್ದೇಶನದ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸದ್ದು ಮಾಡುತ್ತಿದೆ. ನಾಯಕ ಯಾರು ಎಂಬುದು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. `ಸೂರರೈ ಪೋಟ್ರು’ ಖ್ಯಾತಿಯ ನಿರ್ದೇಶಕಿ ಸುಧಾ ಕೊಂಗರ ಡೈರೆಕ್ಷನ್ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.


