‘ಮಹಾನಟಿ’ ಕೀರ್ತಿ ಸುರೇಶ್ (Keerthy Suresh) ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್‌ಗೆ (Varun Dhawan) ನಾಯಕಿಯಾಗಿ ಬಿಟೌನ್‌ಗೆ ಪಾದಾರ್ಪಣೆ ಮಾಡಿದ ಬೆನ್ನಲ್ಲೇ ಕೀರ್ತಿ ಸುರೇಶ್‌ಗೆ ಬಂಪರ್ ಅವಕಾಶವೊಂದು ಸಿಕ್ಕಿದೆ.
ವರುಣ್ ಧವನ್ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ‘ಬೇಬಿ ಜಾನ್’ (Baby John) ಎಂದು ಈ ಸಿನಿಮಾಗೆ ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ‘ಜವಾನ್’ (Jawan) ಡೈರೆಕ್ಟರ್ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಇದರ ನಡುವೆ ಅಕ್ಷಯ್ ಕುಮಾರ್‌ಗೆ (Akshay Kumar) ನಾಯಕಿಯಾಗಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಮನೆಕೆಲಸದಾಕೆಯಿಂದ್ಲೇ ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ
ಸತತ ಸೋಲಿನಿಂದ ಸುಸ್ತಾಗಿರುವ ಅಕ್ಷಯ್ ಕುಮಾರ್ (Akshay Kumar) ಇದೀಗ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಜೊತೆ ಕೈಜೋಡಿಸಿದ್ದಾರೆ. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುವ ಬಗ್ಗೆ ಘೋಷಣೆ ಕೂಡ ಆಗಿದೆ. ಈ ಸಿನಿಮಾದಲ್ಲಿ ನಟಿಸಲು ಹಲವು ನಟಿಮಣಿಯರ ಹೆಸರು ಸದ್ದು ಮಾಡಿತ್ತು. ಕಡೆಯದಾಗಿ ಕೀರ್ತಿ ಸುರೇಶ್ ಸೂಕ್ತ ಎಂದೆನಿಸಿ ನಟಿಗೆ ಸಿನಿಮಾ ಟೀಮ್ ಮಣೆ ಹಾಕಿದೆ.
ಕಾಮಿಡಿ ಕಮ್ ಲವ್ ಸ್ಟೋರಿ ಇರುವ ಸಿನಿಮಾ ಇದಾಗಿದ್ದು, ನಾಯಕನಿಗೆ ಪ್ರಾಮುಖ್ಯತೆ ಇರುವಷ್ಟೇ ಕೀರ್ತಿ ಪಾತ್ರಕ್ಕೂ ವ್ಯಾಲ್ಯೂ ಇದೆಯಂತೆ. ಹಾಗಾಗಿ ನಟಿ ನಟಿಸಲು ಒಪ್ಪಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿದ ಬೆನ್ನಲ್ಲೇ ಸೌತ್ ನಟಿಗೆ ಚಿತ್ರತಂಡ ಮಣೆ ಹಾಕಿದೆ. ಅಂದಹಾಗೆ, ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ತಿರುವ ಅಕ್ಷಯ್- ಕೀರ್ತಿ ಲವ್ ಸ್ಟೋರಿಯೂ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ ಎಂದು ಕಾಯಬೇಕಿದೆ.