ಸೌತ್ ಬ್ಯೂಟಿ ಕೀರ್ತಿ ಸುರೇಶ್ (Keerthy Suresh) ಮದುವೆಯಾದ ಏಳೇ ದಿನಕ್ಕೆ ಕೆಲಸಕ್ಕೆ ಹಾಜರಾಗಿದ್ದಾರೆ. ಮದುವೆಯ ನಂತರ ರಿಲೀಸ್ ಆಗಿರುವ ಬಾಲಿವುಡ್‌ನ ಮೊದಲ ಸಿನಿಮಾದ ಪ್ರಚಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಮಾಡ್ರನ್ ಡ್ರೆಸ್ ಹಾಕಿದ್ರು ಮಾಂಗಲ್ಯ ಧರಿಸಿ ಬಂದ ನಟಿಯ ನಡೆಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ.
Advertisement
ಡಿ.12ರಂದು ನಟಿ ಆಂಟೋನಿ ತಟ್ಟಿಲ್ ಜೊತೆ ಹಸೆಮಣೆ ಏರಿದರು. ಈ ಬೆನ್ನಲ್ಲೇ ಸಿನಿಮಾ ಕೆಲಸದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಜೊತೆಗಿನ ‘ಬೇಬಿ ಜಾನ್’ (Baby John) ಚಿತ್ರದ ಪ್ರಮೋಷನ್ ಜೋರಾಗಿ ನಡೆಯುತ್ತಿದೆ. ಈ ವೇಳೆ, ಕೀರ್ತಿ ಮಾಡ್ರನ್ ಬಟ್ಟೆ ತೊಟ್ಟು ಮಾಂಗಲ್ಯ ಧರಿಸಿ ಬಂದಿರೋದು ಅನೇಕರ ಗಮನ ಸೆಳೆದಿದೆ. ಇನ್ನೂ ಕೆಲವರು ನಟಿಗೆ ಟೀಕೆ ಕೂಡ ಮಾಡಿದ್ದಾರೆ.
Advertisement
View this post on Instagram
Advertisement
ಮಾಂಗಲ್ಯ ಧರಿಸಿದ ಮೇಲೆ ಲಕ್ಷಣವಾಗಿ ಸೀರೆ ಉಡಬಾರದಿತ್ತಾ? ಇಷ್ಟೊಂದು ಎಕ್ಸ್‌ಪೋಸ್ ಬೇಕಿತ್ತಾ? ಎಂದೆಲ್ಲಾ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
ಅಂದಹಾಗೆ, ನಟಿಯ ಮದುವೆಯಲ್ಲಿ ದಳಪತಿ ವಿಜಯ್ ಭಾಗಿಯಾಗಿ ಹಾರೈಸಿದ್ದಾರೆ. ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದ ನಟನ ಫೋಟೋ ಶೇರ್ ಮಾಡಿ ಡ್ರೀಮ್ ಐಕಾನ್ ಎಂದು ಕೀರ್ತಿ ಬಣ್ಣಿಸಿದ್ದಾರೆ.