ಲಂಡನ್: ನಿಮ್ಮ ಅಹಂಕಾರವನ್ನು ಮೊದಲು ಹದ್ದುಬಸ್ತಿನಲ್ಲಿಡಿ ಬಳಿಕ ಉತ್ತಮವಾಗಿ ಅಡುತ್ತೀರಿ ಎಂದು ತಂಡದ ನಾಯಕ ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟ್ ಆಟಗಾರ ಮನಿಂದರ್ ಸಿಂಗ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್‍ನಲ್ಲಿ ಪದೇ ಪದೇ ಎಡವುತ್ತಿದೆ. ಅದರಲ್ಲೂ ಕೊಹ್ಲಿ ಬ್ಯಾಟಿಂಗ್‍ನಲ್ಲಿ ಮಿಂಚುತ್ತಿಲ್ಲ. ಇವರು ಮೊದಲು ತಮ್ಮ ಅಹಂಕಾರವನ್ನು ಬದಿಗೊತ್ತಿ ಆಟವಾಡಿದರೆ ಮಾತ್ರ ಯಶಸ್ಸು ಸಿಗಬಹುದು ಎಂದು ಮನಿಂದರ್ ಸಿಂಗ್ ಖಾಸಗಿ ವಾಹಿನಿಯೊಂದರಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸದೇ 50 ಇನ್ನಿಂಗ್ಸ್ ಕಳೆದ ವಿರಾಟ್ ಬ್ಯಾಟ್
Advertisement
Advertisement
ಇಂಗ್ಲೆಂಡ್‍ನಲ್ಲಿ ವಿರಾಟ್ ಕೊಹ್ಲಿ ಪದೇ ಪದೇ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಈ ಸಮಸ್ಯೆಯನ್ನು ವಿರಾಟ್ ಕೊಹ್ಲಿ ಬೇಗ ಅರಿತುಕೊಳ್ಳಬೇಕಾಗಿದೆ. ಇದಲ್ಲದೆ ಟೀಂ ಇಂಡಿಯಾದ ಬಹುತೇಕ ಆಟಗಾರರು ಪದೇ ಪದೇ ತಪ್ಪಾದ ಶಾಟ್‍ಗಳನ್ನು ಆಯ್ಕೆ ಮಾಡಿ ವಿಕೆಟ್ ಕೈ ಚೆಲ್ಲಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
Anderson is forging a partnership with Butler here!
He gets Captain Kohli to nick one to Buttler once again.
Tune into Sony Six (ENG), Sony Ten 3 (HIN), Sony Ten 4 (TAM, TEL) & SonyLIV (https://t.co/AwcwLCPFGm ) now! ????#ENGvINDOnlyOnSonyTen #BackOurBoys #Kohli #Anderson pic.twitter.com/c0ja9cRr5T
— Sony Sports Network (@SonySportsNetwk) August 25, 2021
ಮೂರನೇ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಹೀನಾಯ ಪ್ರದರ್ಶನ ನೀಡಿದ್ದು ಇಂಗ್ಲೆಂಡ್ ಬೌಲರ್ ಗಳ ಅಬ್ಬರಕ್ಕೆ ಕೇವಲ 78 ರನ್‍ಗಳಿಗೆ ಆಲೌಟ್ ಆಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಓವರಿನ 5ನೇ ಎಸೆತಕ್ಕೆ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ರೋಹಿತ್ ಶರ್ಮಾ 19 ರನ್(105 ಎಸೆತ, 1 ಬೌಂಡರಿ), ಅಜಿಂಕ್ಯಾ ರಹಾನೆ 18 ರನ್(54 ಎಸೆತ, 3 ಬೌಂಡರಿ) ಹೊಡೆದದ್ದು ಬಿಟ್ಟರೆ ಉಳಿದ 8 ಮಂದಿ ಸಿಂಗಲ್ ಡಿಜಿಟ್ ರನ್ ಹೊಡೆದು ಔಟಾದರು. ಇತರ ರೂಪದಲ್ಲಿ 16 ರನ್(11 ಲೆಗ್ ಬೈ, 5 ನೋಬಾಲ್) ಬಂದ ಕಾರಣ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 78 ರನ್ ಗಳಿಸಿತು. ಅದರಲ್ಲೂ ಕೊನೆಯ 6 ವಿಕೆಟ್‍ಗಳು 22 ರನ್‍ಗಳ ಅಂತರದಲ್ಲಿ ಪತನಗೊಂಡಿತ್ತು. ಇದನ್ನೂ ಓದಿ: ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್