ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೆಲವರು ಎಷ್ಟರ ಮಟ್ಟಿಗೆ ದ್ವೇಷಿಸ್ತಾರೆ ಅಂದ್ರೆ, ಅವರು ಏನು ಮಾಡಿದ್ರೂ ಅದ್ರಲ್ಲಿ ತಪ್ಪು ಕಂಡು ಹಿಡಿಯುತ್ತಾರೆ. ಇದ್ರಲ್ಲೇನೋ ಮಸಲತ್ತು ಇದೆ ಎನ್ನುತ್ತಾರೆ.
ಇತ್ತೀಚೆಗೆ ಜರ್ಮನಿಯ ಬರ್ಲಿನ್‍ನಲ್ಲಿ ಪ್ರಧಾನಿ ಮೋದಿ ಇಬ್ಬರು ಚಿಕ್ಕ ಮಕ್ಕಳ ಜೊತೆ ಕೆಲ ಹೊತ್ತು ಕಾಲ ಕಳೆದಿದ್ರು. 7 ವರ್ಷದ ಬಾಲಕನೊಬ್ಬ ದೇಶಭಕ್ತಿ ಗೀತೆ ಹಾಡಿದ್ದನ್ನು ಮೋದಿ ಚಿಟಿಕೆ ಹೊಡೆಯುತ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆದ್ರೇ, ಮೋದಿಯ ಕಟು ಟೀಕಾಕಾರಲ್ಲಿ ಒಬ್ಬರಾಗಿರುವ ಸ್ಟಾಂಡಪ್ ಕಮೆಡಿಯನ್ ಕುನಾಲ್ ಕಮ್ರಾ, ಚಿಕ್ಕ ಮಕ್ಕಳನ್ನು ಮೋದಿ ರಾಜಕೀಯಕ್ಕೆ ಬಳಿಸಿಕೊಳ್ತಿದ್ದಾರೆ ಎಂದು ಟೀಕಿಸಿದ್ರು. ಇದನ್ನೂ ಓದಿ: ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ
Advertisement
Advertisement
ಇದಕ್ಕೆ ಬಾಲಕನ ತಂದೆ ಗಣೇಶ್ ಪೌಲ್ ತಿರುಗೇಟು ನೀಡಿದ್ದು, ತಾಯ್ನಾಡಿಗಾಗಿ ನನ್ನ ಮಗ ಇಷ್ಟಪಟ್ಟು ಹಾಡು ಹಾಡಿದ್ದಾನೆ. ಮಿಸ್ಟರ್ ಕಮ್ರಾ ನಿನಗಿಂತ ನನ್ನ ಮಗನಿಗೆ ತಾಯ್ನಾಡಿನ ಬಗ್ಗೆ ಗೌರವವಿದೆ. ಇಂಥ ಕೀಳು ರಾಜಕೀಯವನ್ನು ಬಿಟ್ಟು ನಿಮ್ಮ ನಟನೆಯಲ್ಲಿ ತೊಡಗಿ ಎಂದು ಟ್ವೀಟ್ ಮಾಡಿದ್ದಾರೆ. ಗಣೇಶ್ ಪೌಲ್ ಟ್ವೀಟ್‍ಗೆ ಮೆಚ್ಚುಗೆ, ಕುನಾಲ್ ಕಮ್ರಾ ಟ್ವೀಟ್‍ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
Advertisement
He is my 7 year old son, who wanted to sing this song for his beloved Motherland . Though he is still very young but certainly he loves his country more than you Mr. Kamra or Kachra watever u are
Keep the poor boy out of your filthy politics & try to work on your poor jokes https://t.co/ECnBFSIWkI
— GANESH POL (@polganesh) May 4, 2022
Advertisement
ಮಗುವಿನೊಂದಿಗೆ ಪ್ರಧಾನಿಯವರ ಮಾತನಾಡುತ್ತಿರುವ ವೀಡಿಯೋವನ್ನು ಕುನಾಲ್ ಕಮ್ರಾ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ 2010 ರ ‘ಪೀಪ್ಲಿ ಲೈವ್’ ಸಿನಿಮಾದಿಂದ ಆ ಪುಟ್ಟ ಬಾಲಕ ‘ಹೇ ಜನ್ಮಭೂಮಿ ಭಾರತ್’ ಹಾಡನ್ನು ಆಡಿದ್ದಾನೆ. ಈ ವೀಡಿಯೋಗೆ ಕಮ್ರಾ ‘ಕಸ’ ಚಿಕ್ಕ ಮಕ್ಕಳನ್ನು ಮೋದಿ ರಾಜಕೀಯಕ್ಕೆ ಬಳಿಸಿಕೊಳ್ತಿದ್ದಾರೆ ಎಂದು ಬರೆದು ಟ್ವೀಟ್ ಮಾಡಿದ್ದರು.
#WATCH PM Narendra Modi in all praises for a young Indian-origin boy as he sings a patriotic song on his arrival in Berlin, Germany pic.twitter.com/uNHNM8KEKm
— ANI (@ANI) May 2, 2022
ಈ ಟ್ವೀಟ್‍ಗೆ ಉತ್ತರಿಸಿದ ಮಗುವಿನ ತಂದೆ ಗಣೇಶ್ ಪೌಲ್, ಅವನು ನನ್ನ 7 ವರ್ಷದ ಮಗ. ತನ್ನ ಪ್ರೀತಿಯ ಮಾತೃಭೂಮಿಗಾಗಿ ಈ ಹಾಡನ್ನು ಹಾಡಲು ಬಯಸಿದ್ದನು. ಅವನು ಇನ್ನೂ ಚಿಕ್ಕವನಾಗಿದ್ದರೂ ಖಂಡಿತವಾಗಿಯೂ ಅವನು ನಿಮಗಿಂತ ಹೆಚ್ಚಾಗಿ ತನ್ನ ದೇಶವನ್ನು ಪ್ರೀತಿಸುತ್ತಾನೆ ಮಿ. ನಿಮ್ಮ ಹೊಲಸು ರಾಜಕೀಯದಿಂದ ಬಡ ಹುಡುಗನನ್ನು ದೂರವಿಡಿ ಮತ್ತು ನಿಮ್ಮ ಕಳಪೆ ಹಾಸ್ಯದ ಮೇಲೆ ಕೆಲಸ ಮಾಡಲು ಪ್ರಯತ್ನಿಸಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?