-ನಿಮ್ಮ ಟೈಂಗೆ ಬರಲಿಲ್ಲ ಅಂದ್ರೆ ಡೋಂಟ್ ವರಿ, ಕಸ ಪಡೆಯಲು ಮನೆ ಬಾಗಿಲಿಗೆ ಬರ್ತಾರೆ
ಬೆಂಗಳೂರು: ಇನ್ಮುಂದೆ ನಿಮ್ಮ ಕಸದ ಡಬ್ಬವನ್ನು ಕೌಂಪೌಂಡ್ ಮೇಲೆ ಅಥವಾ ಗೇಟ್ನಲ್ಲಿ ಇಟ್ಟುಹೋಗಿ ನಮ್ಮ ಗಾಡಿಯವರು ತೆಗೆದುಕೊಂಡು ಹೋಗುತ್ತಾರೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byregowda) ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಜಿಬಿಐ ಐದು ಪಾಲಿಕೆಯ ಆಯುಕ್ತರ ಜೊತೆ ಸಭೆ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಕಸದ ಗಾಡಿಯವರು ನಿಮ್ಮ ಟೈಂಗೆ ಬರುತ್ತಿಲ್ಲ ಎಂದರೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಕಸದ ಡಬ್ಬವನ್ನು ನಿಮ್ಮ ಮನೆಯ ಕೌಂಪೌಂಡ್ ಮೇಲೆ ಅಥವಾ ಗೇಟ್ನಲ್ಲಿ ಇಟ್ಟುಹೋಗಿ, ಬಳಿಕ ನಮ್ಮ ಗಾಡಿಯವರು ಬಂದು ತೆಗೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಡ್ಜ್ ಪುತ್ರನ ಮರ್ಸಿಡಿಸ್ ಕಾರು ಹಿಟ್ & ರನ್ ಕೇಸ್; ತನಿಖೆಯಲ್ಲಿ ಲೋಪ ಆರೋಪಕ್ಕೆ ಕೊಚ್ಚಿ ಪೊಲೀಸ್ ಕಮಿಷನರ್ ಎತ್ತಂಗಡಿ
Met with the commissioners of the five Municipal Corporations of Bengaluru, at the GBA office to assess progress, address bottlenecks and chart the way forward for more efficient, accountable and citizen-centric governance.
ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳ ಆಯುಕ್ತರೊಂದಿಗೆ ಜಿಬಿಎ ಕಚೇರಿಯಲ್ಲಿ ಸಭೆ ನಡೆಸಿ, ಪ್ರಗತಿಯನ್ನು ಪರಿಶೀಲಿಸಲಾಯಿತು. ಕಾರ್ಯನಿರ್ವಹಣೆಯಲ್ಲಿನ ಅಡಚಣೆಗಳನ್ನು ಪರಿಹರಿಸುವುದು ಹಾಗೂ ಹೆಚ್ಚು ದಕ್ಷ, ಹೊಣೆಗಾರಿಕೆಯುತ ಮತ್ತು ನಾಗರಿಕ ಕೇಂದ್ರಿತ ಆಡಳಿತವನ್ನು ರೂಪಿಸುವ ನಿಟ್ಟಿನಲ್ಲಿ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.
#BetterBengaluru— Krishna Byre Gowda (@krishnabgowda) October 28, 2026
ಇನ್ನೂ ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಸುಧಾರಣೆಗೆ ನಯಾ ಪ್ಲ್ಯಾನ್ ತರಲಾಗಿದ್ದು, ಹೊಸ ಕಸದ ಟೆಂಡರ್ನಲ್ಲಿ ಜಿಪಿಎಸ್ ಕಡ್ಡಾಯ ಜೊತೆಗೆ ಎಲ್ಲಾ ಸಿಬ್ಬಂದಿಗೂ ಫೇಶಿಯಲ್ ರೆಕಗ್ನಿಷನ್ ಆಟೆಂಡೆನ್ಸ್ (Facial Recognition Attendence) ಸರ್ಕಾರ ಕಡ್ಡಾಯಗೊಳಿಸಿದೆ. ಜೊತೆಗೆ ಎಲ್ಲವೂ ಹೊಸ ಗಾಡಿಗಳನ್ನು ಬಳಕೆ ಮಾಡಬೇಕು ಎಂದು ಕಡ್ಡಾಯ ರೂಲ್ಸ್ ತರಲಾಗಿದೆ. ಐದು ಸಾವಿರ ಗಾಡಿ ಆಟೋ ಟಿಪ್ಪರ್ ಇದೆ. ಆದರೆ ಈಗ ಶೇ.25ರಷ್ಟು ಬೀದಿಗೆ ಇಳಿಯುತ್ತಿಲ್ಲ ಅಂತ ಗೊತ್ತಿದೆ. ಈಗ ಹೊಸದಾಗಿ 4,500 ಫೋರ್ ವೀಲರ್ ವಾಹನ ತರಿಸಿದ್ದೇವೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಸಚಿವರು, ರಸ್ತೆ ಗುಂಡಿಗಳ ಅಬ್ಬರದ ಬಗ್ಗೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಐದು ಪಾಲಿಕೆ ವ್ಯಾಪ್ತಿಯಲ್ಲೂ ಗುಂಡಿ ದರ್ಬಾರ್ ನಡೆಯುತ್ತಿದ್ದು, ಗುಂಡಿ ಮುಚ್ಚಲು ಟಾರ್ಗೆಟ್ ಕೊಟ್ಟಿದ್ದರೂ ಕೂಡ ಇನ್ನೂ ಗುಂಡಿ ಮುಚ್ಚಿಲ್ಲ. ಜೊತೆಗೆ ಕಸ ವಿಲೇವಾರಿ ಸಮಸ್ಯೆಯ ಬಗ್ಗೆಯೂ ಕ್ಲಾಸ್ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ದುರಹಂಕಾರಕ್ಕೆ ಪರಿಷತ್ ಫಲಿತಾಂಶವೇ ಉತ್ತರ: ಹೆಚ್ಡಿಕೆ
