LatestMain PostNational

ಕೇದಾರನಾಥನ ಗರ್ಭಗುಡಿಗೆ ಚಿನ್ನದ ಲೇಪ ಬೇಡ- ಅರ್ಚಕರ ವಿರೋಧ

ಡೆಹ್ರಾಡೂನ್: ಉತ್ತರಾಖಂಡದ(Uttarakhand) ಜಗತ್ಪ್ರಸಿದ್ಧ ಕೇದಾರನಾಥ ದೇವಾಲಯದ(Kedarnath Temple) ಗರ್ಭಗುಡಿಯೊಳಗಿನ ಗೋಡೆಗೆ ಚಿನ್ನದ ಲೇಪನ(Gold Plating) ಮಾಡುವುದಕ್ಕೆ ಕೆಲ ಅರ್ಚಕರು(Priests) ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಹಾಳು ಮಾಡುತ್ತಿದೆ ಎಂದು ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ ಗೋಡೆಯ ನಾಲ್ಕೂ ಬದಿಗಳಲ್ಲಿ ಬೆಳ್ಳಿಯ ತಟ್ಟೆಗಳಿಂದ ಮುಚ್ಚಲಾಗಿದೆ. ಇದೀಗ ಚಿನ್ನದ ಲೇಪವನ್ನು ಅಳವಡಿಸಲು ಈ ಬೆಳ್ಳಿಯ ತಟ್ಟೆಗಳನ್ನು ತೆಗೆಯಬೇಕಾಗುತ್ತದೆ. ಚಿನ್ನದ ಲೇಪವನ್ನು ಹಾಕುವ ಪ್ರಕ್ರಿಯೆಯಲ್ಲಿ ದೊಡ್ಡ ಕೊರೆಯುವ ಯಂತ್ರಗಳನ್ನು ಬಳಸಲಾಗುತ್ತದೆ. ಇವುಗಳಿಂದ ದೇವಾಲಯದ ಗೋಡೆಗೆ ಹಾನಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಶಿವಭಕ್ತರೊಬ್ಬರು ದೇವಾಲಯದ ಗರ್ಭಗುಡಿಯ ಗೋಡೆಗೆ ಚಿನ್ನದ ಲೇಪಕ್ಕೆ ಚಿನ್ನವನ್ನು ಅರ್ಪಣೆ ಮಾಡಿದ್ದಾರೆ. ಈ ಪ್ರಸ್ತಾಪವನ್ನು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಅಂಗೀಕರಿಸಿದ್ದು, ದೇವಾಲಯದ ಗೋಡೆಗೆ ಚಿನ್ನದ ಲೇಪ ಮಾಡಲಾಗುತ್ತಿದೆ. ಇದನ್ನೂ ಓದಿ: ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ

ಆದರೆ ಈ ಚಿನ್ನದ ಲೇಪದಿಂದ ದೇವಾಲಯದ ಗೋಡೆಗೆ ಹಾನಿಯಾಗುತ್ತಿದೆ. ಈ ಉದ್ದೇಶಕ್ಕಾಗಿ ದೊಡ್ಡ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ದೇವಾಲಯದ ಶತಮಾನಗಳ ಹಳೆಯ ಸಂಪ್ರದಾಯವನ್ನು ಈ ರೀತಿಯಾಗಿ ಹಾಳು ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಯಾತ್ರಾರ್ಥಿ ಸಂತೋಷ್ ತ್ರಿವೇದಿ ಕೇದಾರನಾಥದಲ್ಲಿ ಹೇಳಿದ್ದಾರೆ.

ಗರ್ಭಗುಡಿಯ ಜೀರ್ಣೋದ್ಧಾರ ಕಾರ್ಯಕ್ಕೆ ಕೆಲ ಅರ್ಚಕರು ಮಾತ್ರವೇ ವಿರೋಧ ವ್ಯಕ್ತಪಡಿಸಿದ್ದು, ಕೆಲ ಹಿರಿಯ ಅರ್ಚಕರು ಈ ನಿರ್ಧಾರಕ್ಕೆ ಒಲವು ತೋರಿದ್ದಾರೆ. ಇದರಿಂದಾಗಿ ಕೇದಾರನಾಥದ ಅರ್ಚಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗದೆ. ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ದೇಹದಾನ ಮಾಡಿ ಸಾರ್ಥಕತೆ ಮೆರೆದ ಅಭಿಮಾನಿ ಶಿಲ್ಪಾ

ಈ ಬಗ್ಗೆ ಮಾತನಾಡಿದ ಹಿರಿಯ ಅರ್ಚಕ ಶ್ರೀನಿವಾಸ್ ಪೋಸ್ತಿ ಹಾಗೂ ಕೇದಾರಸಭಾ ಮಾಜಿ ಅಧ್ಯಕ್ಷ ಮಹೇಶ್ ಬಗ್ವಾಡಿ, ದೇವಾಲಯವು ಸನಾತನ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಅದರ ಗೋಡೆಗಳಿಗೆ ಚಿನ್ನದ ಲೇಪವನ್ನು ಅಳವಡಿಸುತ್ತಿರುವುದು ಹಿಂದೂ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button