LatestMain PostNational

ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತ

Advertisements

ಡೆಹ್ರಾಡೂನ್: ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಅಮರನಾಥದಲ್ಲಿ ನಡೆದ ಘಟನೆ ಬೆನ್ನಲ್ಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಭಾಗದಲ್ಲಿ ಮೇಘಸ್ಫೋಟಗೊಂಡಿದ್ದು, ನಿನ್ನೆ ಸಂಜೆ ಅಮರನಾಥದಲ್ಲಿ ಏಕಾಏಕಿ ಸೃಷ್ಟಿಯಾದ ಪ್ರವಾಹದಿಂದ ನದಿ ತಟದಲ್ಲಿ ಹಾಕಲಾಗಿದ್ದ ಶಿಬಿರಗಳು ಕೊಚ್ಚಿ ಹೋಗಿವೆ. ಘಟನೆಯಲ್ಲಿ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದೆ. ಇದುವರೆಗೆ 16 ಜನರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್

ದೇಶಾದ್ಯಂತ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಭಾಗದಲ್ಲಿ ಮೇಘಸ್ಫೋಟಗೊಂಡು ಭೀಕರ ಪ್ರವಾಹ ಸೃಷ್ಟಿಯಾಗಿದೆ. ಕಣಿವೆ ತಟದಲ್ಲಿ ಹರಿಯುತ್ತಿದ್ದ ನದಿ ಒಂದೇ ಸಮನೆ ಉಕ್ಕಿ ಹರಿದಿದ್ದು ಅಮರನಾಥ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗಾಗಲೇ ಘಟನೆಯಲ್ಲಿ 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಗೊಂಡ ಹಲವರನ್ನು ಏರ್‌ಲಿಫ್ಟ್ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಊರಿಗೆ ವಾಪಾಸಾಗಲು ಅನುಮತಿಗಾಗಿ ಕಾಯುತ್ತಿದ್ದೇವೆ – ಯಾತ್ರೆಯಿಂದಲೇ ಪಬ್ಲಿಕ್ ಟಿವಿಗೆ ಲೈವ್ ಕೊಟ್ಟ ಕನ್ನಡಿಗರು

Live Tv

Leave a Reply

Your email address will not be published.

Back to top button