ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು (Key Answers) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಪ್ರಕಟಿಸಿದೆ.
ಆಗಸ್ಟ್ 2 ರಂದು ನಡೆದ ‘ಸಾಮಾನ್ಯ ಜ್ಞಾನ’ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಪ್ರಕಟಿತ ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಆಗಸ್ಟ್ 6 ರ ಬೆಳಿಗ್ಗೆ 10:30 ರ ಒಳಗಾಗಿ ಪ್ರಾಧಿಕಾರದ ಆನ್‌ಲೈನ್ ಪೋರ್ಟಲ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಆಕ್ಷೇಪಣೆ ಸಲ್ಲಿಸುವಾಗ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್ (Version Code), ಪ್ರಶ್ನೆ ಸಂಖ್ಯೆ ಹಾಗೂ ಬೆಂಬಲಿತ ಪೂರಕ ದಾಖಲೆಗಳನ್ನು (Supporting Documents) ಕಡ್ಡಾಯವಾಗಿ PDF ರೂಪದಲ್ಲಿ ಲಗತ್ತಿಸಬೇಕು.
ಆಗಸ್ಟ್ 2ರಂದು ನಡೆದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಕೀ ಉತ್ತರಗಳನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಈ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 6ರಂದು ಬೆಳಿಗ್ಗೆ 10.30ರೊಳಗೆ ಸಲ್ಲಿಸಬೇಕು.
ವಿವರಗಳಿಗೆ ವೆಬ್ ಸೈಟ್ ನೋಡಿ.
-ಹೆಚ್.ಪ್ರಸನ್ನ ಐಎಎಸ್… pic.twitter.com/oGqLoMp0oT
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 3, 2026
ಸಲ್ಲಿಸುವ ಪ್ರತಿ ಆಕ್ಷೇಪಣೆಗೆ 25 ರೂ. ಶುಲ್ಕ ಪಾವತಿಸಬೇಕಿರುತ್ತದೆ. ಈ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ. ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದಿದ್ದಲ್ಲಿ, ಅಪೂರ್ಣ/ಆಧಾರರಹಿತ ದಾಖಲೆಗಳನ್ನು ಲಗತ್ತಿಸಿದ್ದಲ್ಲಿ ಹಾಗೂ ನಿಗದಿತ ಶುಲ್ಕ ಪಾವತಿಸದಿದ್ದರೆ ಅಂತಹ ಆಕ್ಷೇಪಣೆಗಳನ್ನು ಪ್ರಾಧಿಕಾರ ತಿರಸ್ಕರಿಸಲಿದೆ.
ವಿಷಯ ತಜ್ಞರ ಸಮಿತಿಯು ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮಗೊಳಿಸುವ ಕೀ ಉತ್ತರಗಳೇ ಅಂತಿಮವಾಗಿರಲಿವೆ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೀ ಉತ್ತರಕ್ಕೆ ಕ್ಲಿಕ್ ಮಾಡಿ: https://cetonline.karnataka.gov.in/keawebentry456/cpcrpc2026/CPC_RPC_KEY_finalkannada.pdf
ಆಕ್ಷೇಪಣೆ ಸಲ್ಲಿಕೆಗೆ ಕ್ಲಿಕ್ ಮಾಡಿ: https://cetonline.karnataka.gov.in/keAOBJECTIONS/FORMS/Login.aspx
