– ಸಿಇಟಿ ಫಲಿತಾಂಶದಲ್ಲಿ ಬೆಂಗಳೂರಿಗೆ ಹೆಚ್ಚು ರ‍್ಯಾಂಕ್
– ರ‍್ಯಾಂಕ್ ವಿಚಾರವಾಗಿ ಯಾರೂ ಗೊಂದಲ ಪಡಬೇಕಾಗಿಲ್ಲ: ಹೆಚ್.ಪ್ರಸನ್ನ
ಬೆಂಗಳೂರು: 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET 2024) ಫಲಿತಾಂಶವನ್ನು ಶನಿವಾರ ಏಕಾಏಕಿ ಪ್ರಕಟಿಸಿದ ಬಗ್ಗೆ ಇಂದು (ಭಾನುವಾರ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
Advertisement
ನಿನ್ನೆ ಯುಜಿಸಿಇಟಿ -2024 ಫಲಿತಾಂಶ ಪ್ರಕಟಿಸಲಾಗಿತ್ತು. ಪಠ್ಯದಲ್ಲಿ ಇಲ್ಲದ ವಿಷಯಗಳ ಬಗ್ಗೆ ಸಾಕಷ್ಟು ಗೊಂದಲ, ಗದ್ದಲ ಎದುರಾಗಿತ್ತು. ಇದೇ ಕಾರಣಕ್ಕೆ ಕೆಇಎ ಕಾರ್ಯನಿರ್ವಾಹಕಿ ರಮ್ಯಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ನಿನ್ನೆ ದಿಢೀರ್ ಆಗಿ ಸಿಇಟಿ ಫಲಿತಾಂಶ ಪ್ರಕಟಿಸಿ ಕೆಇಎ ಮತ್ತೆ ಎಡವಟ್ಟು ಮಾಡಿತ್ತು. ಸುದ್ದಿಗೋಷ್ಠಿ ಕರೆಯದೆ ಪತ್ರಿಕಾ ಪ್ರಕಟಣೆ ಹೊರಡಿಸಿ ಫಲಿತಾಂಶ ಘೋಷಿಸಲಾಗಿತ್ತು. ಕೆಇಎ ಯ ಕಾರ್ಯವೈಖರಿ ಬಗ್ಗೆ ಸಾಕಷ್ಟು ಆಕ್ರೋಶ ಹೆಚ್ಚಾದ ಹಿನ್ನೆಲೆ ಇಂದು ಪತ್ರಿಕಾಗೋಷ್ಠಿ ಆಯೋಜನೆ ಮಾಡಿತ್ತು. ಇದನ್ನೂ ಓದಿ: ಬೆಂ. ಗ್ರಾಮಾಂತರದಲ್ಲಿ ಹೆಚ್ಚಿನ ಭದ್ರತೆ ಒದಗಿಸಿ: ಆಯೋಗಕ್ಕೆ ಡಾ.ಮಂಜುನಾಥ್ ಪತ್ರ
Advertisement
Advertisement
ಈ ಬಾರಿ ಸಿಇಟಿ ಫಲಿತಾಂಶದಲ್ಲಿ ಬೆಂಗಳೂರಿಗೆ ಹೆಚ್ಚು ರ‍್ಯಾಂಕ್ ಬಂದಿದೆ. ಇಂಜಿನಿಯರಿಂಗ್ ವಿಭಾಗದ ಮೊದಲ ಐದು ರ‍್ಯಾಂಕ್ ಬೆಂಗಳೂರಿನ ವಿದ್ಯಾರ್ಥಿಗಳ ತೆಕ್ಕೆಗೆ ಸಿಕ್ಕಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಪಿಂಯಾರ್ಡ್ ಶಾಲೆ ಹರ್ಷ ಕಾರ್ತಿಕೇಯ ರಾಜ್ಯಕ್ಕೆ ಮೊದಲ ರ‍್ಯಾಂಕ್ ಬಂದಿದ್ದಾರೆ. 3,49,653 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. 3,10,314 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 737 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.
Advertisement
ಮಲೇಶ್ವರಂ ಕೆಇಎ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾತನಾಡಿ, ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ನಿನ್ನೆ ಫಲಿತಾಂಶ ಪ್ರಕಟ ಮಾಡಿದ್ವಿ. ಪತ್ರಿಕಾಗೋಷ್ಠಿ ಮಾಡದೇ ಫಲಿತಾಂಶ ಪ್ರಕಟ ಮಾಡಲಾಗಿತ್ತು. ಫಲಿತಾಂಶ ವಿಚಾರವಾಗಿ ಸಾಕಷ್ಟು ಒತ್ತಡವಿತ್ತು. ಈ ಹಿನ್ನೆಲೆ ನಿನ್ನೆ ಫಲಿತಾಂಶ ಪ್ರಕಟಿಸಲಾಗಿತ್ತು. ನಂತರದಲ್ಲಿ ಸಾಕಷ್ಟು ಗೊಂದಲ ಆಗಿದೆ ಎಂದು ನಮಗೆ ಅರಿವಾಯ್ತು. ಇನ್ಮುಂದೆ ಸರಿಯಾಗಿ ನಿಯಮಗಳನ್ನು ಪಾಲಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭವಾನಿ ರೇವಣ್ಣ ಬಂಧನಕ್ಕೆ ಪೊಲೀಸರು ಹುಡುಕುತ್ತಿದ್ದಾರೆ: ಪರಮೇಶ್ವರ್
ಪಿಯು ಬೋರ್ಡ್‌ನಿಂದ ನಮಗೆ ಡಾಟಾ ಕೊಡಲಾಗುತ್ತೆ. ಸಾಫ್ಟ್‌ವೇರ್‌ನಲ್ಲಿ ಎರಡು ಅಂಕಗಳನ್ನ ಮ್ಯಾಚ್ ಮಾಡುವ ಸಂದರ್ಭದಲ್ಲಿ ಅಂಕಗಳು ಮ್ಯಾಚ್ ಆಗೊಲ್ಲ. ಯಾರಿಗೆಲ್ಲಾ ಸಮ್ಯಸೆ ಆಗಿದಿಯೋ, ಅವರು ಗಾಬರಿ ಪಡುವ ಅವಶ್ಯಕತೆ ಇಲ್ಲ. ನಾಳೆ ಮಾರ್ಕ್ಸ್ ಸೇರಿಸಲು ಅವಕಾಶ ನೀಡಲಾಗುತ್ತೆ. ನಂತರದಲ್ಲಿ ಅವರಿಗೆ ರ‍್ಯಾಂಕ್ ನೀಡಲಾಗುತ್ತೆ. ಮೆಡಿಕಲ್ ಇಂಜಿನಿಯರ್ ಸೀಟ್‌ಗಳಿಗೆ ಕಂಬೈನ್ಡ್ ಆಗಿ ಸೀಟ್ ಆಲಾಟ್ಮೆಂಟ್ ಆಗುತ್ತೆ. ನೀಟ್ ಪರೀಕ್ಷೆ ಫಲಿತಾಂಶ ಇನ್ನೂ ಬಂದಿಲ್ಲ. ಸೀಟ್ ಮ್ಯಾಟ್ರಿಕ್ಸ್ ಕುರಿತು ಶಿಕ್ಷಣ ಇಲಾಖೆ ಅದನ್ನ ಪಬ್ಲಿಶ್ ಮಾಡಲಾಗುತ್ತೆ. ನೀಟ್ ರಿಲಸ್ಟ್ ಬಂದ ಬಳಿಕ ನಾವು ಸೀಟು ಹಂಚಿಕೆ ಮಾಡ್ತೀವಿ. ಪೋಷಕರು ಆತುರದಲ್ಲಿ ಗಾಬರಿ ಪಡುವ ಅಗತ್ಯವಿಲ್ಲ. ಸರ್ಕಾರದಿಂದ ನಿಗದಿಯಾಗುವ ಸೀಟುಗಳಿಗೆ ಯಾವುದೇ ಕಾಲೇಜು ಶುಲ್ಕ ಪಡೆಯಲು ಅವಶ್ಯಕತೆ ಇಲ್ಲ. ರ‍್ಯಾಂಕ್ ಆಧಾರದ ಮೇಲೆ ನಿಮಗೆ ಸೀಟು ಸಿಕ್ಕೇ ಸಿಗುತ್ತೆ. ರ‍್ಯಾಂಕ್ ವಿಚಾರವಾಗಿ ಕೂಡ ಗೊಂದಲ ಪಡಬೇಕಾಗಿಲ್ಲ ಎಂದು ಹೇಳಿದರು. ಅಭ್ಯರ್ಥಿಗಳು ತಮ್ಮ CET ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ cetonline.karnataka.gov.in. ಪರಿಶೀಲಿಸಬಹುದು.
ಇಂಜಿನಿಯರಿಂಗ್ ವಿಭಾಗದ ಟಾಪರ್ಸ್
ಮೊದಲ ರ‍್ಯಾಂಕ್: ಹರ್ಷ ಕಾರ್ತಿಕೇಯಾ ವುತುಕುರಿ, ನಾರಾಯಣ ಓಲಂಪಿಯಾಡ್ ಶಾಲೆ, ಸಹಕಾರ ನಗರ
ಎರಡನೇ ರ‍್ಯಾಂಕ್: ಮನೋಜ್ ಸೋಹನ್ ಗಾಜುಲ, ಶ್ರೀ ಚೈತನ್ಯ ಟೆಕ್ನೋ ಶಾಲೆ, ಮಾರತಹಳ್ಳಿ
ಮೂರನೇ ರ‍್ಯಾಂಕ್: ಅಭಿನವ್ ಪಿ.ಜೆ, ನೆಹರೂ ಸ್ಮಾರಕ ವಿದ್ಯಾಲಯ, ಜಯನಗರ
ನಾಲ್ಕನೇ ರ‍್ಯಾಂಕ್: ಸನ್ನಾ ತಬಸ್ಸುಮ್, ನಾರಾಯಣ ಪಿಯು ಕಾಲೇಜು ಎಎಂಸಿಓ ಲೇಔಟ್ ಸಹಕಾರ ನಗರ
(ಬಿಎನ್‌ವೈಎಸ್) ನ್ಯಾಚರೋಪತಿ, ಯೋಗ ವಿಜ್ಞಾನದ ಟಾಪರ್ಸ್
ಮೊದಲ ರ‍್ಯಾಂಕ್: ನಿಹಾರ್ ಎಸ್.ಆರ್, ಎಕ್ಸ್‌ಪರ್ಟ್ ಪ್ರೀ ಯೂನಿವರ್ಸಿಟಿ ಸೈನ್ಸ್ ಕಾಲೇಜು, ಮಂಗಳೂರು
ಎರಡನೇ ರ‍್ಯಾಂಕ್: ಸಂಜನಾ ಸಂತೋಷ್ ಕಟ್ಟಿ, ಎಕ್ಸ್‌ಪರ್ಟ್ ಕಾಲೇಜ್ ಅರುಕುಲ, ಮಂಗಳೂರು
ಮೂರನೇ ರ‍್ಯಾಂಕ್: ಪ್ರೀತಮ್ ರವಲಪ್ಪ ಪನಧಾಕರ್, ಶೇಷಾದ್ರಿಪುರಂ ಪಿಯು ಕಾಲೇಜ್, ಬೆಂಗಳೂರು
ಬಿಎಸ್ಸಿ ನರ್ಸಿಂಗ್ ವಿಭಾಗ
ಮೊದಲ ರ‍್ಯಾಂಕ್: ನಿಹಾರ್ ಎಸ್.ಆರ್, ಎಕ್ಸ್‌ಪರ್ಟ್ ಪ್ರೀ ಯೂನಿವರ್ಸಿಟಿ ಸೈನ್ಸ್ ಕಾಲೇಜ್, ಮಂಗಳೂರು
ಎರಡನೇ ರ‍್ಯಾಂಕ್: ಮಿಹಿರ್ ಗಿರೀಶ್ ಕಾಮತ್, ಎಕ್ಸ್‌ಪರ್ಟ್ ಪ್ರೀ ಯೂನಿವರ್ಸಿಟಿ ಸೈನ್ಸ್ ಕಾಲೇಜ್, ಮಂಗಳೂರು
ಮೂರನೇ ರ‍್ಯಾಂಕ್: ಅನಿಮೇಷನ್ ಸಿಂಗ್ ರಾಥೋರ್, ಶ್ರೀ ಚೈತನ್ಯ ಟೆಕ್ನೋ ಶಾಲೆ ಜಂಬು ಸವಾರಿ ದಿನ್ನೆ, ಜೆಪಿ ನಗರ
ವೆಟರ್ನರಿ ವಿಭಾಗ
ಮೊದಲ ರ‍್ಯಾಂಕ್: ಕಲ್ಯಾಣ್ ವಿ, ಶ್ರೀ ಚೈತನ್ಯ ಟೆಕ್ನೊ ಶಾಲೆ, ಮಾರತಹಳ್ಳಿ
ಎರಡನೇ ರ‍್ಯಾಂಕ್: ಡಿ.ಎನ್.ನಿತೀನ್, ನಾರಾಯಣ ಈ ಟೆಕ್ನೋ ಶಾಲೆ ಯಲಹಂಕ ನ್ಯೂ ಟೌನ್
ಮೂರನೇ ರ‍್ಯಾಂಕ್: ನಿಹಾರ್ ಎಸ್.ಆರ್, ಎಕ್ಸ್‌ಪರ್ಟ್ ಪ್ರಿ ಯೂನಿವರ್ಸಿಟಿ ಸೈನ್ಸ್ ಕಾಲೇಜ್, ಮಂಗಳೂರು
ಬಿ ಫಾರ್ಮಾ ವಿಭಾಗ
ಮೊದಲನೇ ರ‍್ಯಾಂಕ್: ಕಲ್ಯಾಣ್ ವಿ, ಶ್ರೀ ಚೈತನ್ಯ ಟೆಕ್ನೊ ಶಾಲೆ, ಮಾರತಹಳ್ಳಿ
ಎರಡನೇ ರ‍್ಯಾಂಕ್: ಹರ್ಷ ಕಾರ್ತಿಕೇಯಾ, ನಾರಾಯಣ ಒಲಂಪಿಯಾಡ್ ಶಾಲೆ, ಸಹಕಾರ ನಗರ
ಮೂರನೇ ರ‍್ಯಾಂಕ್: ಡಿ.ಎನ್.ನಿತಿನ್, ನಾರಾಯಣ ಇ ಟೆಕ್ನೊ ಶಾಲೆ, ಯಲಹಂಕ ನ್ಯೂ ಟೌನ್
ಡಿ ಫಾರ್ಮಾ ವಿಭಾಗ
ಮೊದಲ ರ‍್ಯಾಂಕ್: ಕಲ್ಯಾಣ್ ವಿ, ಶ್ರೀ ಚೈತನ್ಯ ಟೆಕ್ನೊ ಶಾಲೆ, ಮಾರತಹಳ್ಳಿ
ಎರಡನೇ ರ‍್ಯಾಂಕ್: ಹರ್ಷ ಕಾರ್ತಿಕೇಯಾ, ನಾರಾಯಣ್ ಓಲಂಪಿಯಾಡ್ ಶಾಲೆ, ಸಹಕಾರ ನಗರ
ಮೂರನೇ ರ‍್ಯಾಂಕ್: ಡಿ.ಎನ್.ನಿತೀನ್, ನಾರಾಯಣ ಇ ಟೆಕ್ನೊ ಶಾಲೆ, ಯಲಹಂಕ ನ್ಯೂ ಟೌನ್
ಬಿಎಸ್ಸಿ ನರ್ಸಿಂಗ್ ವಿಭಾಗ
ಮೊದಲ ರ‍್ಯಾಂಕ್: ಕಲ್ಯಾಣ್ ವಿ, ಶ್ರೀ ಚೈತನ್ಯ ಟೆಕ್ನೊ ಶಾಲೆ ಮಾರತಹಳ್ಳಿ
ಎರಡನೇ ರ‍್ಯಾಂಕ್: ಡಿ.ಎನ್.ನಿತಿನ್, ನಾರಾಯಣ ಇ ಟೆಕ್ನೊ ಶಾಲೆ, ಯಲಹಂಕ ನ್ಯೂಟೌನ್
ಮೂರನೇ ರ‍್ಯಾಂಕ್: ನಿಹಾರ್, ಎಕ್ಸ್‌ಪರ್ಟ್ ಪ್ರಿ ಯೂನಿವರ್ಸಿಟಿ ಸೈನ್ಸ್ ಕಾಲೇಜ್, ಮಂಗಳೂರು