ಬೆಂಗಳೂರು: ಹಿಂದುಳಿದ ವರ್ಗಗಳ ಇಲಾಖೆ/ಸಮಾಜ ಕಲ್ಯಾಣ ಇಲಾಖೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examination Authority) ಫೆ.18ರಂದು ಪರೀಕ್ಷೆ ನಡೆಸಲಿದೆ.
ಅರ್ಹ ಅಭ್ಯರ್ಥಿಗಳು ಹೆಸರು, ಜನ್ಮ ದಿನಾಂಕ, ಅರ್ಜಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಬಳಸಿ ಪ್ರಾಧಿಕಾರದ ವೆಬ್‌ಸೈಟಿನಿಂದ (http://kea.kar.nic.in) ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಸ್.ರಮ್ಯಾ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗಲ್ಲಿ ಹಿಂದೂ ಒಬ್ಬ ಮುಸ್ಲಿಂನ್ನು ಹತ್ಯೆಗೈದಾಗ ಗಲಾಟೆ ಆಗ್ಲಿಲ್ಲ, ಹಿಂದೂವೇ ಹತ್ಯೆಯಾಗಿದ್ರೆ ಬೆಂಕಿ ಹಚ್ಚಿರೋರು: ದಿನೇಶ್ ಗುಂಡೂರಾವ್
ಜೊತೆಗೆ ಪ್ರಾಧಿಕಾರವು ಕೆಪಿಸಿಎಲ್ ಸಂಸ್ಥೆಯ ನೇಮಕಾತಿ ಸಂಬಂಧ ಫೆ.18ರಂದು ಮರುಪರೀಕ್ಷೆ ಮತ್ತು 19ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಿದೆ. ಹಾಗೆಯೇ ಕರ್ನಾಟಕ ರಾಜ್ಯ ಹಣಕಾಸು ನಿಗಮದ (KSFC) ಖಾಲಿ ಹುದ್ದೆಗಳಿಗೂ ನೇಮಕಾತಿಗಾಗಿ ಫೆ.17ರಂದು ಪರೀಕ್ಷೆ ನಡೆಯಲಿದೆ. ಇದನ್ನೂ ಓದಿ: ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ, ಸತ್ಯ – ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡ್ತೀನಿ: ಸಿಎಂ
ಈ ಪರೀಕ್ಷೆಗಳಿಗೆ ಕೂಡ ಅರ್ಹ ಅಭ್ಯರ್ಥಿಗಳು ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಹೆಚ್ಚುವರಿ ಮಾಹಿತಿಗಳ ಅವಶ್ಯಕತೆಯಿದ್ದರೆ keauthority-ka@nic.inಗೆ ಇ-ಮೇಲ್ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ತಿರುಪತಿ ಯಾತ್ರೆ ಭಾಗ್ಯ