ಹೈದರಾಬಾದ್: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹೇಳಿದ್ದಾರೆ.
ನಿಜಾಮಾಬಾದ್‍ನಲ್ಲಿ ಸಮಗ್ರ ಜಿಲ್ಲಾ ಕಚೇರಿ ಸಂಕೀರ್ಣ ಹಾಗೂ ಟಿಆರ್‌ಎಸ್ ಪಕ್ಷದ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್‌ಗಳನ್ನು ಅಳವಡಿಸುವಂತೆ ರೈತರಿಗೆ ಒತ್ತಾಯಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಯುವಕ ಮರ್ಡರ್
2024ರ ಲೋಕಸಭೆ ಚುನಾವಣೆಯ ನಂತರ ಈ ದೇಶದ ಎಲ್ಲ ರೈತರು ಬಿಜೆಪಿಯೇತರ ಬಾವುಟ ಹಾರಿಸಲಿದ್ದಾರೆ. ನಾವು ಈ ಬಡವರ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಮತ್ತು ನಮ್ಮದೇ ಸರ್ಕಾರ ದೆಹಲಿಯಲ್ಲಿ ಕೂಡ (ರಾಷ್ಟ್ರೀಯ ಮಟ್ಟದಲ್ಲಿ) ಅಧಿಕಾರಕ್ಕೆ ಬರಲಿದೆ. ನಾನು ಈ ದೇಶದ ರೈತರಿಗೆ ಸಹಿ ಸುದ್ದಿಯನ್ನು ನೀಡುತ್ತಿದ್ದೇನೆ. ನೀವು ಬಿಜೆಪಿಯೇತರ ಸರ್ಕಾರವನ್ನು ಆರಿಸಿದರೆ, ತೆಲಂಗಾಣದಂತೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಒಲ್ಲದ ವಿವಾಹ – ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ
ರೈತರು ಸೇರಿದಂತೆ ಎಲ್ಲರಿಗೂ 24/7 ವಿದ್ಯುತ್ ನೀಡುವ ಯಾವುದೇ ರಾಜ್ಯ ಈ ದೇಶದಲ್ಲಿ ಇಲ್ಲ ಮತ್ತು ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ಆರ್ಥಿಕ ನೆರವು ನೀಡುವ ಏಕೈಕ ರಾಜ್ಯ ತೆಲಂಗಾಣವಾಗಿದೆ ಎಂದು ಹೇಳಿದರು. ಜೊತೆಗೆ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿ ಸರ್ಕಾರವು ಈಗ ರಸಗೊಬ್ಬರ, ಡೀಸೆಲ್ ಮತ್ತು ಇತರ ಇನ್‍ಪುಟ್‍ಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಕೃಷಿ ಕೆಲಸ ಕಷ್ಟಕರ ಎಂಬಂತೆ ರೈತರಿಗೆ ತೋರಿಸಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಕೃಷಿ ಭೂಮಿಯನ್ನು ಕಿತ್ತುಕೊಂಡು ಕಾರ್ಪೋರೇಟ್ ಕಂಪನಿಗೆ ನೀಡಬಹುದು ಎಂದು ಆರೋಪಿಸಿದರು.
ಅನುತ್ಪಾದಕ ಆಸ್ತಿ (ಎನ್‍ಪಿಎ) ಹೆಸರಿನಲ್ಲಿ 12 ಲಕ್ಷ ಕೋಟಿ ಮೌಲ್ಯದ ಸಾಲವನ್ನು ಮನ್ನಾ ಮಾಡಿರುವ ಕೇಂದ್ರವು ದೇಶದ ಎಲ್ಲ ರೈತರಿಗೆ 1.45 ಲಕ್ಷ ಕೋಟಿ ವೆಚ್ಚದ ಉಚಿತ ವಿದ್ಯುತ್ ನೀಡಲು ಇಚ್ಛಿಸುತ್ತಿಲ್ಲ ಎಂದು ಕಿಡಿಕಾರಿದರು.