ಗಣೇಶ್ ಟೀಮ್ ವಿರುದ್ಧ ಶಿವಣ್ಣ ಟೀಮ್ ಸೋಲು: ಗಂಗಾ ವಾರಿಯರ್ಸ್ ಗೆ ಕೆಸಿಸಿ ಕಪ್

Public TV
1 Min Read
KCC 2

ಕೆಸಿಸಿ (KCC) ಪಂದ್ಯಾವಳಿ ನಿನ್ನೆಗೆ ಮುಕ್ತಾಯವಾಗಿದೆ. ಅಂತಿಮ ಹಣಾಹಣೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನೇತೃತ್ವದ ಗಂಗಾ ವಾರಿಯರ್ಸ್ ಟೀಮ್ ಈ ವರ್ಷದ ಕ್ರಿಕೆಟ್ ಕಪ್ ಅನ್ನು ಗೆದ್ದು ಬೀಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಗಣೇಶ್ ಮತ್ತು ಶಿವರಾಜ್ ಕುಮಾರ್ (Shivaraj Kumar) ಟೀಮ್ ನಡುವೆ ಅಂತಿಮ ಪಂದ್ಯ ಏರ್ಪಟ್ಟಿತ್ತು. ಗಣೇಶ್ ಟೀಮ್ ಮುಂದೆ ಶಿವಣ್ಣ ಟೀಮ್ ಶರಣಾಗಬೇಕಾಯಿತು. ವಿನ್ನರ್ ಆಗಿ ಗಂಗಾ ವಾರಿಯರ್ಸ್ ಹೊರ ಹೊಮ್ಮಿದ್ದಾರೆ.

KCC 1

ಶುಭ ಕೋರಿದ ಡಿಕೆಶಿ

ನಮ್ಮ ಚಂದನವನದ ನಟರು, ಕ್ರಿಕೆಟ್ ಆಟಗಾರರು, ಪತ್ರಕರ್ತರು ಸೇರಿ ಒಟ್ಟಿಗೆ ಕ್ರಿಕೆಟ್ (Kannada Chalanchitra Cup) ಪಂದ್ಯ ಆಡುವ ಮೂಲಕ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಶ್ಲಾಘಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಕೆಸಿಸಿ ಕಪ್ ಫೈನಲ್ ಪಂದ್ಯ ವೀಕ್ಷಿಸಿದ ಉಪಮುಖ್ಯಮಂತ್ರಿಗಳು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

KCC DK Shivakumar 1

ಅಭಿಮಾನಿಗಳ ಜತೆ ಸೇರಿ ಈ ಕೆಸಿಸಿ ಕಪ್ ಪಂದ್ಯಾವಳಿಯನ್ನು ಬಹಳ ಸಂತೋಷದಿಂದ ನಾನು ವೀಕ್ಷಣೆ ಮಾಡಿದ್ದೇನೆ. ಇಂತಹ ಪ್ರಯತ್ನಕ್ಕೆ ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರುತ್ತದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ.‌ ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿಯಾಗುತ್ತಿದೆ. ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಕೋರುತ್ತೇನೆ ಎಂದರು.

 

ಸ್ಟಾರ್ ಕಲಾವಿದರ ಕೆಸಿಸಿ ಪಂದ್ಯ ಡಿಸೆಂಬರ್ 23ರಿಂದ ನಡೆಯುತ್ತಿದೆ. ಈ ಪಂದ್ಯ 3 ದಿನಗಳ ಕಾಲ ಸ್ಟಾರ್ ಟೀಮ್‌ಗಳ ಮಧ್ಯೆ ಹಣಾಹಣಿ ನಡೆಯಿತು. ಡಿಸೆಂಬರ್ 25ರಂದು ಕಡೆಯ ದಿನದ ರೋಚಕ ಪಂದ್ಯ ವೀಕ್ಷಿಸಲು ಡಿ.ಕೆ ಶಿವಕುಮಾರ್ ಭಾಗಿಯಾಗಿ ಕಿಚ್ಚ ಸುದೀಪ್ ಜೊತೆ ಕೆಲ ಕಾಲ ಸಮಯ ಕಳೆದರು. ಕ್ರಿಕೆಟ್ ಪಂದ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ.

Share This Article