ಸ್ವಾತಂತ್ರ್ಯ ಅಮೃತ ಮಹೋತ್ಸವ ಯುವ ಜನರಲ್ಲಿ ರಾಷ್ಟ್ರೀಯತೆ ಸ್ಫೂರ್ತಿಯನ್ನು ತುಂಬಲು ಪ್ರೇರಕ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Public TV
1 Min Read
Shivakumar

ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವ ಯುವ ಜನರಲ್ಲಿ ರಾಷ್ಟ್ರೀಯತೆ ಸ್ಫೂರ್ತಿಯನ್ನು ತುಂಬಲು ಪ್ರೇರಕವಾಗಲಿ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದ್ದಾರೆ.

Amrita Jubilee 3

ಶಿವಮೊಗ್ಗ ರಂಗಾಯಣ ಮತ್ತು ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ `ರಂಗಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ವರ್ಷವಿಡೀ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳು ಯುವ ಜನರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳಬೇಕು. ಅದು ರಾಷ್ಟ್ರೀಯತೆ ಸ್ಪೂರ್ತಿಯನ್ನು ತುಂಬಲು ಪ್ರೇರಕವಾಗಲಿ ಎಂದು ಸ್ಫೂರ್ತಿದಾಯ ನುಡಿಗಳನ್ನು ಆಡಿದರು.ಇದನ್ನೂ ಓದಿ:ಬಹಳ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ: ಹಾಲಪ್ಪ ಆಚಾರ್

ಕಳೆದ 75 ವರ್ಷಗಳಲ್ಲಿ ದೇಶ ಮಾಡಿರುವ ಸಾಧನೆ, ಪ್ರಗತಿಗಳ ಬಗ್ಗೆ ನೆನಪಿಸುವಂತಹ ಕಾರ್ಯಕ್ರಮ ಇದಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಬದುಕು, ತ್ಯಾಗಗಳು ಯುವ ಜನರಿಗೆ ಸ್ಪೂರ್ತಿಯಾಗಬೇಕಿದೆ. ಪ್ರತಿಯೊಬ್ಬರೂ ಅವರ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯ ನಿರ್ವಹಿಸುವುದೇ ದೇಶವನ್ನು ಕಟ್ಟುವ ಕಾರ್ಯ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರ ಪಾಲುದಾರಿಕೆ ಅಗತ್ಯ. ಎಲ್ಲರೂ ತಮ್ಮ ಪಾಲಿನ ಕಾರ್ಯ ನಿರ್ವಹಿಸಿದರೆ ದೇಶ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಲು ಸಾಧ್ಯವಿದೆ ಎಂದರು.

Amrita Jubilee SMG 1

ಕೋವಿಡ್ 19 ನಡುವೆಯೇ ಬದುಕನ್ನು ಕಟ್ಟಿಕೊಳ್ಳಲು ನಾವು ಕಲಿಯುತ್ತಿದ್ದೇವೆ. ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುತ್ತಾ, ಕನಿಷ್ಟ ಶಿಸ್ತನ್ನು ಪಾಲಿಸಿದರೆ ಕೊರೊನಾ 3ನೇ ಅಲೆ ಎದುರಿಸಿ ಬದುಕಲು ಸಾಧ್ಯವಿದೆ ಎಂದರು.ಇದನ್ನೂ ಓದಿ:ಬೈ ಎಲೆಕ್ಷನ್‍ನಲ್ಲಿ ಸೋತ್ರೂ ನಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಬಲ ಕೊಟ್ಟಿದ್ದಾರೆ: ಡಿ.ಕೆ.ಶಿವಕುಮಾರ್

ಕಾರ್ಯಕ್ರಮದ ಅಂಗವಾಗಿ ನಡೆದ ರಂಗಾಯಣ ಕಲಾವಿದರ ದೇಶಭಕ್ತಿ ಸಂಗೀತ, ಈಸೂರು ಶೂರರು ಮತ್ತು ವಿದುರಾಶ್ವಥದಲ್ಲಿ ಸ್ವಾತಂತ್ರ್ಯದ ಬೆಳಕು ಎಂಬ ಎರಡು ಕಿರುನಾಟಕ ಪ್ರದರ್ಶನ, ಸಹಚೇತನ ನಾಟ್ಯಾಲಯ ಕಲಾವಿದರಿಂದ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಮತ್ತು ನಟಮಿತ್ರರು ತೀರ್ಥಹಳ್ಳಿ ಕಲಾವಿದರಿಂದ ಮೂಕಾಭಿನಯ ಮೆಚ್ಚುಗೆಗೆ ಪಾತ್ರವಾದವು.ಇದನ್ನೂ ಓದಿ:ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

Share This Article
Leave a Comment

Leave a Reply

Your email address will not be published. Required fields are marked *