ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಸದಸ್ಯರಾದ ಕೆ.ಬಿ.ಶಾಣಪ್ಪ ಹಾಗೂ ತಾರಾ ಅನುರಾಧಾ ಅವರ ಅವಧಿ ಮುಕ್ತಾಯವಾಗಲಿದ್ದು, ವಿದಾಯ ಭಾಷಣ ಮಾಡಿದ ಅವರು ಭಾವುಕರಾಗಿ, ಆನಂದ ಭಾಷ್ಪ ಸುರಿಸಿದರು.
ಆಗಸ್ಟ್ 9ರಂದು ಪರಿಷತ್ ಸದಸ್ಯರಾದ ಶಾಣಪ್ಪ ಹಾಗೂ ತಾರಾ ಅವರ ಅವಧಿ ಮುಗಿಯಲಿದೆ. ಶಾಣಪ್ಪ ಅವರು ತಮ್ಮ ರಾಜಕೀಯ ಜೀವನದ ಹಲವು ಘಟನೆ ವಿವರಿಸಿ ಹಾಸ್ಯದ ಹೊಳೆ ಹರಿಸಿದರು. ಭಾಷಣ ಮುಗಿಯುತ್ತಿದ್ದಂತೆ ಏನನ್ನೋ ಕಳೆದುಕೊಂಡವರಂತೆ ಕುಳಿತು ಬಿಟ್ಟರು.
ಇತ್ತ ಗದ್ಗದಿತರಾಗಿಯೇ ಮಾತನಾಡಿದ ತಾರಾ ಅನುರಾಧಾ ಅವರು, ಮತ್ತೇ ಪಕ್ಷ ಅವಕಾಶ ಕೊಟ್ಟರೆ ಸದನಕ್ಕೆ ಬರುವೆ ಎಂದು ಆಸೆ ವ್ಯಕ್ತಪಡಿಸಿ, ಆಸನದಲ್ಲಿ ಕುಳಿತು ಆನಂದಭಾಷ್ಪ ಸುರಿಸಿದರು.